ಗೃಹಮಂತ್ರಿಗೊಂದು ಬಹಿರಂಗ ಸಂದೇಶ

ರಾಜ್ಯದಲ್ಲಿ ಭೂಕಂಪ ನಡೆದರೂ ತಮ್ಮ ಗೊತ್ತಿಲ್ಲ ಎಂಬ ಉತ್ತರ ಬಿಟ್ಟರೆ ನಿಮಗೇನೂ ಗೊತ್ತೇ ಇರುವುದಿಲ್ಲ. ಕಳೆದ ಎರಡು ದಿನಗಳಲ್ಲಿ ನಿಮ್ಮ ಸ್ವಂತ ಜಿಲ್ಲೆ ತುಮಕೂರಿನ ಗುಬ್ಬಿ ತಾಲೂಕಿನ ಅಪ್ರಾಪ್ತ ಬಾಲಕನ ಮೇಲೆ ಪೈಚಾಶಿಕ ಕೃತ್ಯ ಪೊಲೀಸ್ ನೈತಿಕಗಿರಿ ಇದೂ ನಿಮಗೆ ಗೊತ್ತೇ ಇಲ್ಲವೇ ? ಅದೂ ಸಾಲದು ಎಂಬಂತೆ ಮಂಡ್ಯ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅಮಾನವೀಯವಾಗಿ ಪೊಲೀಸ್ ದೌರ್ಜನ್ಯ ನಡೆದಿದೆ ಅಲ್ಲವೇ ? ಅದೂ ನಿಮಗೆ ಗೊತ್ತೇ ಇಲ್ಲವೇ ? ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ನಿಮಗೆ ಇಲ್ಲವೇ ? ದ ಕ ಜಿಲ್ಲೆಯ ಮೂಡಬಿದ್ರೆಯಲ್ಲಿ ನಿಮ್ಮ ಪಕ್ಷದ ಫುಡಾರಿ ಎಪಿಎಂಸಿ ಚುನಾವಣೆಯ ವಿಜಯೋತ್ಸವದಲ್ಲಿ ಪರಾಜಿತ ವಲೇರಿಯನ್ ಕುಟಿನ್ಹಾರ ಮೇಲೆ ನಡೆದ ಹಲ್ಲೆಯೂ ನಿಮಗೆ ಗೊತ್ತೇ ಇಲ್ಲವೇ ? ಇನ್ನು ಒಂದೇ ವರ್ಷದಲ್ಲಿ ತಮ್ಮ ಗೃಹಖಾತೆಯಿಂದ ನಿಮ್ಮ ಸ್ವಂತ ಗ್ರಹಕ್ಕೆ ಜನರು ಕಳುಹಿಸಲಿದ್ದಾರೆ ಎಂಬುದೂ ನಿಮಗೆ ಗೊತ್ತೇ ಇಲ್ಲವೇ ? ಅಂತೂ ರಾಜ್ಯದ ಜನತೆ ಭಾಗ್ಯವಂತರು

  • ಶ್ರೀಕರ, ಮೂಡಬಿದ್ರೆ