ಮಾಹಿತಿ ಆಯೋಗದಲ್ಲಿ ವರ್ಷಗಟ್ಟಲೆ ಅಪೀಲುಗಳು ಬಾಕಿ

ಮುಖ್ಯ ಮಾಹಿತಿ ಆಯುಕ್ತರಿಗೆ ಬಹಿರಂಗ ಪತ್ರ

ಕರ್ನಾಟಕ ಮಾಹಿತಿ ಆಯೋಗದ ಮುಂದೆ ಸೆಕ್ಷನ್ 19(3) ಅನ್ವಯ ಪ್ರಸಕ್ತ ಸಲ್ಲಿಸಲಾಗುವ ಅಪೀಲುಗಳನ್ನು ಅವುಗಳನ್ನು ದಾಖಲಿಸಿದ 18 ತಿಂಗಳುಗಳಿಂದ ಎರಡು ವರ್ಷಗಳ ನಂತರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ  ವಿಚಾರಣೆಯ ದಿನಾಂಕದಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಉಪಸ್ಥಿತರಿಲ್ಲದೇ ಇದ್ದರೆ ಪ್ರಕರಣವನ್ನು ಇನ್ನೂ ಎರಡು ತಿಂಗಳಿಂದ ಆರು ತಿಂಗಳ ತನಕ ಮುಂದೂಡಲಾಗುತ್ತದೆ. ಅಪೀಲು ಸಲ್ಲಿಸಿ ಐದು ವರ್ಷಗಳ ನಂತರವೂ ವಿಚಾರಣೆಗೆ ಕೈಗೆತ್ತಿಕೊಳ್ಳದ ಹಲವು ಪ್ರಕರಣಗಳು ಆಯೋಗದ ಮುಂದಿವೆ. ಇದರಿಂದಾಗಿ ಇಲ್ಲಿಯ ತನಕ 34,000ಕ್ಕೂ ಅಧಿಕ ಪ್ರಕರಣಗಳು ವಿಲೇವಾರಿಯಾಗದೆ ಬಾಕಿಯಾಗಿವೆ. ಆಯೋಗದ ಮುಂದೆ ಯಾವುದಾದರೂ ಅಪೀಲನ್ನು ಇಂದು ದಾಖಲಿಸಿದರೆ ಅದು ಈ ಬಾಕಿ ಪ್ರಕರಣಗಳಿಂದಾಗಿ ಮೂರು ವರ್ಷಗಳ ನಂತರವಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಂಭವವಿದೆ
ಕೇಂದ್ರ ಮಾಹಿತಿ ಆಯೋಗ ಮತ್ತು ಕೆಲವು ಇತರ ಆಯೋಗಗಳು ಅನುಸರಿಸುವ ಪ್ರಕ್ರಿಯೆಯಿಂದ ತಿಳದು ಬರುವಂತೆ ಪ್ರಥಮ ವಿಚಾರಣೆಯಂದೇ ಮಾಹಿತಿ ನಡಬೇಕೆಂಬ ಆದೇಶವನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡುತ್ತಾರೆ ಹಾಗೂ ದಂಡ ವಿಧಿಸಬೇಕಾದಂತಹ ಪ್ರಕರಣಗಳಲ್ಲಿ ಕಾಯಿದೆಯ ಸೆಕ್ಷನ್ 20 ಅನ್ವಯ ಏಕಕಾಲದಲ್ಲಿ ನೊಟೀಸ್ ಕೂಡ ನೀಡಲಾಗುತ್ತದೆ  ಅಂತೆಯೇ ಮಾಹಿತಿಯನ್ನು ನೀಡಲಾಗದೇ ಇದ್ದರೆ ಹಾಗೂ ಆಯೋಗದ ಆದೇಶಗಳನ್ನು ಪಾಲಿಸದೇ ಇದ್ದ ಪಕ್ಷದಲ್ಲಿ ಆಯೋಗದ ಆದೇಶವನ್ನು ಪಾಲಿಸಲಾಗಿಲ್ಲವೆಂದು ದೂರು ನೀಡಬಹುದಾಗಿದೆ. ಇಂತಹ ದೂರುಗಳನ್ನು ಅವುಗಳನ್ನು ದಾಖಲಿಸಿದ 30 ದಿನಗಳಿಗೊಳಗಾಗಿ ಆಯೋಗ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತದೆ ಆದುದರಿಂದ ಕೇಂದ್ರ ಮಾಹಿತಿ ಆಯೋಗ ಹಾಗೂ ಕೆಲವೊಂದು ಇತರ ರಾಜ್ಯಗಳ ಮಾಹಿತಿ ಆಯೋಗಗಳು ಕರ್ನಾಟಕದ ಮಾಹಿತಿ ಆಯೋಗಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವಇಲೇವಾರಿ ಮಾಡುತ್ತದೆ  ಆದರೆ ಕರ್ನಾಟಕದಲ್ಲಿನ ಮಾಹಿತಿ ಆಯೋಗದ ಆಯುಕ್ತರುಗಳು ಸಂಬಂಧಿತರು ಮಾಹಿತಿ ನೀಡುವ ತನಕ ವಿಚಾರಣೆ ನಡೆಸುತಿದ್ದು ಸಂಬಂಧಿತರು ಆದೇಶವನ್ನು ಪಾಲಿಸಿದ ನಂತರವಷ್ಟೇ ಪ್ರಕರಣವನ್ನು ಮುಚ್ಚಲಾಗುತ್ತದೆ. ಹಲವಾರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆಯೋಗದ ಮುಂದೆ ಹಾಜರಾಗುವುದಿಲ್ಲ ಅಥವಾ ಅದರ ಆದೇಶವನ್ನು ಪಾಲಿಸುತ್ತಿಲ್ಲವೆಂಬುದನ್ನು ಇಲ್ಲಿ ಗಮನಿಸಬಹದಾಗಿದೆ. ಇದರಿಂದಾಗ ಪ್ರತಿಯೊಂದು ಅಪೀಲಿನ ವಿಚಾರದಲ್ಲಿ ಹಲವಾರು ಸುತ್ತಿನ ವಿಚಾರಣೆ ನಡೆಸಬೇಕಾಗುತ್ತಿದೆ ಹಾಗೂ ಇದರಿಂದ ಇಡೀ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ  ಒಂದು ಅಪೀಲಿನ ವಿಚಾರದಲ್ಲಿ 12ಕ್ಕೂ ಹೆಚ್ಚು ಸುತ್ತಿನ ವಿಚಾರಣೆ ನಡೆಸಿದ ದೃಷ್ಟಾಂತಗಳೂ ಇವೆ ಹಾಗೂ ಅಪೀಲುದಾರರು ಇನ್ನೂ ತಾವು ಕೊರಿದ ಮಾಹಿತಿ ಪಡೆಯಲು ಹೋರಾಟ ನಡೆಸುವಂತಾಗಿದೆ

ನ್ಯಾಯಾಂಗ ನಿಂದನೆ ಕಾಯ್ದೆ 1971 ಇದರ ಸೆಕ್ಷನ್ 11 ಹಾಗೂ 12 ಅನ್ವಯ ಕರ್ನಾಟಕ ಮಾಹಿತಿ ಆಯೋಗವು ಪ್ರಕರಣ ಸಂಖ್ಯೆ ಕೆಐಸಿ : 2850 : ಸಿಓಎಂ : 2007 ಇದರಲ್ಲಿ 5.12.2017ರಂದು ನೀಡಿದ ಆದೇಶ ಜಾರಿಗೊಳಿಸದ್ದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಕೋರುವ ಅರ್ಜಿ ದಾಖಲಾಗಿತ್ತು. ಆರ್ಟಿಐ ಕಾಯಿದೆಯನ್ವಯ ಆಯೋಗ ತನ್ನ ಆದೇಶ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಲು ಸೆಕ್ಷನ್ 20 ಮೂಲಕ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಈ ದೂರು ಅರ್ಜಿಯನ್ನು ವಿಲೇವಾರಿಗೊಳಿಸುವಾಗ ಮಾನ್ಯ ಹೈಕೋರ್ಟ್ ಹೇಳಿತ್ತಲ್ಲದೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ರದ್ದುಗೊಳಿಸಿ ಆರ್ಟಿಐ ಕಾಯಿದೆಯ ಸೆಕ್ಷನ್ 20 ಅನ್ವಯ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸುವಂತೆ ಹೇಳಿತ್ತು. ಆದುದರಿಂದ ಮಾಹಿತಿ ಆಯೋಗದ ಆದೇಶಗಳನ್ನು ಪಾಲಿಸದೇ ಇದ್ದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಣೆಯಿಂದ ನ್ಯಾಯಾಂಗ ನಿಂದನೆ ದಾಖಲಿಸಬಹುದಾಗಿದೆ ನೀಡಲಾದ ಮಾಹಿತಿ ಸೂಕ್ತವಾಗಿಲ್ಲದೇ ಇದ್ದರೂ ಸಂಬಂಧಿತರು ಇಂತಹುದೇ ಕ್ರಮ ಕೈಗೊಳ್ಳಬಹುದಾಗಿದೆ. ಇಂತಹ ಪ್ರಕರಣಗಳ ವಿಚಾರಣೆಗೆಂದೇ ಆಯೋಗ ವಾರದಲ್ಲಿ ಒಂದು ದಿನವನ್ನು ನಿಗದಿಪಡಿಸಿ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮಾಡಬಹುದಾಗಿದೆ

  • ಬಿ ಎಚ್ ವೀರೇಶ
    ಮಾಹಿತಿ ಹಕ್ಕು ಕಾರ್ಯಕರ್ತ  ಬೆಂಗಳೂರು