ಅಲ್ಪಸ್ವಲ್ಪ ಹಳೆ ನೋಟು ಇಟ್ಟುಕೊಂಡರೆ ಅಪರಾಧ

ಐನೂರು ಹಾಗೂ ಒಂದು ಸಾವಿರ ನೋಟು ನಿಷೇಧ ನಂತರದ ದಿನಗಳಲ್ಲಿ ರಾತ್ರಿ ಬೆಳಗಾಗುವುದರೊಂದಿಗೆ ದಿನಕ್ಕೊಂದು ಕಾನೂನುಗಳನ್ನು ತಂದು ಜನಸಾಮಾನ್ಯರಿಗೆ ತಲೆ ನೋವು ಕೊಟ್ಟಿದ್ದಲ್ಲದೇ ಇನ್ನು ಮುಂದೆ ಅಮಾನ್ಯ ನೋಟುಗಳನ್ನು ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧ ದಂಡದ ಜತೆ ಮತ್ತೆ ನಾಲ್ಕು ವರ್ಷ ಜೈಲು ಶಿಕ್ಷೆ ಎಂಬ ವಿಚಿತ್ರ ನಿಯಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ  ಇದು ಹಾಸ್ಯಾಸ್ಪದ ನಿರ್ಧಾರವಲ್ಲವೇ   ಈಗಾಗಲೇ ಅಮಾನ್ಯಗೊಂಡ ಶೇಕಡ 99ರಷ್ಟು ನೋಟುಗಳು ಬ್ಯಾಂಕುಗಳಿಗೆ ಸಂದಾಯವಾಗಿವೆ ಎಂಬ ಮಾಹಿತಿ ಸರಕಾರ ಹಾಗೂ ಬ್ಯಾಂಕಿಂಗ್ ವಲಯದಿಂದಲೇ ಸುದ್ದಿಯಾಗಿದೆ  ಇನ್ನೊಂದೆಡೆ ನೋಟು ಬದಲಾಯಿಸಿಕೊಳ್ಳುವ ಅವಕಾಶವನ್ನೂ ಸ್ಥಗಿತಗೊಳಿಸಲು ಮೊದಲೇ ನಿರ್ಧರಿಸಲಾಗಿದೆ  ಹಾಗಿರುವಾಗ ಅಲ್ಪಸ್ವಲ್ಪ ಹಳೇ ನೋಟು ಇಟ್ಟುಕೊಂಡರೂ ಅದು ಅಪರಾಧ ಹೇಗಾದೀತು   ನೋಟು ಅಮಾನ್ಯವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇಂಥ ಹುಚ್ಚುತನದ ನಿಯಮ ತಂದರೆ ಜನರು ನಗುತ್ತಾರಷ್ಟೇ  ಈಗಿರುವ ಅಪರಾಧಗಳನ್ನೇ ನಿಯಂತ್ರಿಸಲಾಗದ ಸರಕಾರದ ಈ ಹೊಸ ವರಸೆ ಈಗಾಗಲೇ ಅತಿಯಾದಂತೆ ಅನಿಸುತ್ತದೆ

ಎಸ್ ಪ್ರವೀಣ್ ಬಂಗೇರ  ಉಪ್ಪಿನಂಗಡಿ