ಪುತ್ತೂರು ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ಅಭಿನಂದನೆ

ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುವ ಮಹಾಲಿಂಗೇಶ್ವರ ಸ್ವಾಮಿ ಸನ್ನಿಧಿಯ ಬಹಳ ಭಕ್ತಿಮಯವಾಗಿ ಕಾಣುತ್ತಿದೆ. 1.50 ಕೋಟಿ ರಾಜಗೋಪುರ, ಈ ಕ್ಷೇತ್ರದ ಮಹಿಮೆ ಸಾರಿ ಹೇಳುತ್ತಲಿದೆ ಹಾಗೂ ಇನ್ನಿತರ ಕೆಲಸಗಳು ಭರದಿಂದ ಸಾಗುವುದು ನೋಡಿದರೆ ಪುತ್ತೂರು ಹಾಗೂ ಆಸುಪಾಸಿನ ಭಕ್ತವೃಂದಕ್ಕೆ ಬಹಳ ಸಂತಸ ಉಂಟಾಗುತ್ತದೆ. ಕೂಡಲೇ ದೇವಳ ಜಮೀನಿಗೆ ಭದ್ರವಾಗಿ ಬೇಲಿ ಹಾಕಬೇಕು. ದೇವಳದ ಜಮೀನು ಯಾವುದೇ ರೀತಿಯಲ್ಲಿ ಹಾಳಾಗಬಾರದು.
ಹಾಗೇನೇ ಇದರೊಟ್ಟಿಗೆ ದೇವಳದ `ಕೆರೆ’ಯ ಹೊಳೆತ್ತುವುದು ಬಹಳ ಮುಖ್ಯ. ಈಗಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ನಮ್ಮೆಲ್ಲರ ಅಭಿನಂದನೆಗಳು. ಇನ್ನೊಂದು ವಿಷಯ. ಚಪ್ಪಲಿ ಇಡಲು ಒಂದು ಸರಿಯಾದ ವ್ಯವಸ್ಥೆ ಆಗಬೇಕು. ಸೋಮವಾರ ದಿನ ವಿಪರೀತ ಭಕ್ತರು ಬರುವುದರಿಂದ ಚಪ್ಪಲಿ ಸಮಸ್ಯೆ ಕಾಡುತ್ತಿದೆ

  • ಎಸ್ ಮಹಾಲಿಂಗ  ಪುತ್ತೂರು