ವಿಲನ್ ನಾಯಕಿ ಆಮಿ

`ದಿ ವಿಲನ್’ ಚಿತ್ರ ಶುರುವಾದಾಗಿನಿಂದಲೂ ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸುತ್ತಾ ಸಾಗಿದೆ. ಮೊದಲನೆಯದಾಗಿ ಈ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಅದಲ್ಲದೇ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ,  ತೆಲುಗು ನಟ ಶ್ರೀಕಾಂತ್ `ವಿಲನ್’ ಪಾಳಯಕ್ಕೆ ಈಗಾಗಲೇ ಸೇರಿಕೊಂಡಿದ್ದಾರೆ.

ಇದೀಗ ಚಿತ್ರತಂಡದಿಂದ ಬಂದ ಮಾಹಿತಿ ಪ್ರಕಾರ `ವಿಲನ್’ ನಾಯಕಿಯಾಗಿ ಬ್ರಿಟಿಷ್ ಮಾಡೆಲ್ ಕಮ್ ನಟಿ ಆಮಿ ಜಾಕ್ಸನ್ ನಟಿಸಲಿದ್ದಾಳೆ.

ಆಮಿ ಈಗಾಗಲೇ ಹಿಂದಿ, ತೆಲುಗು, ತಮಿಳಿನಲ್ಲಿ ನಟಿಸಿದ್ದು ಕನ್ನಡಿಗರಿಗೂ ತನ್ನ ಜಲ್ವಾ ತೋರಿಸಲು ಸಿದ್ಧಳಾಗುತ್ತಿದ್ದಾಳೆ ಎನ್ನಲಾಗಿದೆ. ಅಂದ ಹಾಗೆ ಆಮಿ ಯಾರ ಜೊತೆ ಡ್ಯೂಯೆಟ್ ಹಾಡಲಿದ್ದಾಳೆ ಎನ್ನುವ ಖಚಿತ ಮಾಹಿತಿ ಇನ್ನೂ ಬಂದಿಲ್ಲ. ಮೂಲಗಳ ಪ್ರಕಾರ ಆಮಿ ಸುದೀಪಗೆ ನಾಯಕಿಯಾದರೆ ತಾಪ್ಸಿ ಪನ್ನುವನ್ನು ಶಿವರಾಜ್ ಕುಮಾರಗೆ ನಾಯಕಿಯಾಗಿ ತರುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಈ ನಡುವೆ ಅವರ ಡೇಟ್ಸ್ ಸರಿಯಾಗಿ ಹೊಂದಿಕೆಯಾಗದಿದ್ದರೆ ಅಧಿತಿ ರಾವ್ ಹೈದರಿ ಹಾಗೂ ಶೃತಿ ಹಾಸನ್ ಹೆಸರನ್ನೂ ಲಿಸ್ಟಿನಲ್ಲಿಟ್ಟುಕೊಂಡಿದ್ದರು ನಿರ್ದೇಶಕ ಪ್ರೇಮ್. ಆಮಿ ಸದ್ಯ ರಜನಿಕಾಂತ್ ಜೊತೆ `2.0′ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಸದ್ಯವೇ `ವಿಲನ್’ ಚಿತ್ರತಂಡ ಶೂಟಿಂಗಿಗಾಗಿ ಲಂಡನ್ನಿಗೆ ತೆರಳುವ ತಯಾರಿಯಲ್ಲಿದೆ.