ಮತಿ ಇಲ್ಲದಂತಾದ ಅಮುಕ್ತ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ  ಅಮುಕ್ತ  ಅಸ್ತಿತ್ವಕ್ಕೆ ಬಂದಾಗ ಅಲ್ಲಿ ಉದಾತ್ತ ಧ್ಯೇಯೋದ್ದೇಶವಿತ್ತು  ಇಂದು ಇದಕ್ಕೆ  ಅಮುಕ್ತ  ಅದಕ್ಕೆಲ್ಲ ತಿಲಾಂಜಲಿ ಕೊಟ್ಟಿದೆ ಎಂಬ ನೋವು ಮಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರನ್ನು ಕಾಡತೊಡಗಿದೆ   ಅಮುಕ್ತ  ವರ್ಷಕ್ಕೊಂದು ಸಭೆ ನಡೆಸಿ ಅದಕ್ಕೆ ಸಚಿವರನ್ನು ಆಹ್ವಾನಿಸಿ ಅವರನ್ನು ಹಾಡಿ ಹೊಗಳಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ  ಇದರಲ್ಲಿ ಪದಾಧಿಕಾರಿಗಳು ತಮ್ಮ ಲಾಭ ಮಾಡಿಕೊಳ್ಳುತ್ತಿದ್ದಾರೆ  ಸಾಮಾನ್ಯ ಸದಸ್ಯರಿಗೆ ಯಾವುದೇ ಲಾಭವಾಗುತ್ತಿಲ್ಲ. ಪ್ರತಿಯೊಬ್ಬರಿಂದಲೂ  ಅಮುಕ್ತ  ಸ್ಟ್ರಗಲ್ ಫಂಡ್ ಎಂದು ಹಣ ವಸೂಲು ಮಾಡುತ್ತದೆ  ಆದರೆ ಪದಾಧಿಕಾರಿಗಳು ಪ್ರತೀ ವರ್ಷ ಸಮ್ಮೇಳನಕ್ಕೆಂದು ವಿಮಾನದಲ್ಲಿ ದೇಶ ಸುತ್ತುತ್ತಾರೆ  ತಮ್ಮ ಕುಟುಂಬವನ್ನೂ ಕರೆದೊಯ್ಯುತ್ತಾರೆ  ಪದಾಧಿಕಾರಿಗಳ ಯಾವುದೇ ಇಂಕ್ರಿಮೆಂಟ್  ಎಜಿಪಿ ಇತ್ಯಾದಿ ಸೌಲಭ್ಯಗಳು ತಕ್ಷಣವೇ ಇತ್ಯರ್ಥವಾಗುತ್ತವೆ  ಆದರೆ ಇತರ ಉಪನ್ಯಾಸಕರು ಅರ್ಹತೆ ಹೊಂದಿದ್ದರೂ ಅದರಿಂದ ವಂಚಿತರಾಗುತ್ತಿದ್ದಾರೆ  ತನ್ನ ಸದಸ್ಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದ ಅದು ಪದಾಧಿಕಾರಿಗಳ ಕೂಟವಾಗಿದೆ
ಇಂದು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲ  ಖಾಲಿ ಇರುವ ಹುದ್ದೆಗಳಿಗೆ ನೇಮಕ ಆಗುತ್ತಿಲ್ಲ  ಹತ್ತಾರು ವರ್ಷಗಳಿಂದ ಹತ್ತು ಸಾವಿರ ರೂಪಾಯಿ ತಿಂಗಳ ಪಗಾರಕ್ಕೆ ಎಂಎ ಪಿ ಎಚ್ ಡಿ ಪದವಿ ಪಡೆದವರು ದುಡಿಯುತ್ತಿದ್ದಾರೆ  ಕನಿಷ್ಠ 25 ವರ್ಷದ ಹಿಂದೆ ಯಾವುದೋ ಕಾಲದ ಎಂ ಎ ಮಾಡಿದವರು ಲಕ್ಷ ರೂಪಾಯಿ ತಿಂಗಳ ಪಗಾರ ಪಡೆಯುತ್ತಿದ್ದಾರೆ. ಕೆಲವು ಪದಾಧಿಕಾರಿಗಳ ಸಂಬಳ ಒಂದು ಲಕ್ಷದ 60 ಸಾವಿರ ರೂಪಾಯಿ ದಾಟಿದೆ. ಇವರದ್ದು ಯುಜಿಸಿ ಸ್ಕೇಲ್  ಆದರೆ ಅರ್ಹತೆ ಯುಜಿಸಿ ನಿಗದಿ ಮಾಡಿದಂತೆ ಇಲ್ಲ.  ನೆಟ್ ಎಂಬ ಪರೀಕ್ಷೆಯನ್ನು ಜೀವಮಾನದಲ್ಲಿ ಎದುರಿಸಿದವರಲ್ಲ  ಯುಜಿಸಿ ಉಪನ್ಯಾಸಕರಿಗೆ  ನೆಟ್  ಪಾಸಾಗಿರಬೇಕು ಎಂಬ ನಿಯಮ ಇದೆ  ಅಮುಕ್ತದ ಕೆಲವರಿಗೆ ಅದರ ಫುಲ್ ಫಾರಂ ಗೊತ್ತಿಲ್ಲ  ಆದರೆ ಆಗಾಗ ಶಿಕ್ಷಣದ ಗುಣಮಟ್ಟ ವೃದ್ಧೀಕರಣದ ಸೆಮಿನಾರ್ ಸಂಘಟಿಸಿ ಬಂಬಾಟ್ ಸುಳ್ಳು ಹೇಳುತ್ತಾರೆ  ಇಂತಹ ಅಜ್ಞಾನಿಗಳನ್ನು ಇಟ್ಟುಕೊಂಡರೆ ಗುಣಮಟ್ಟ ವೃದ್ಧಿಸುವುದಾದರೂ ಹೇಗೆ  ಇನ್ನು ಇವರು ತಮ್ಮ ನಿವೃತ್ತಿ ವಯಸ್ಸನ್ನು 65 ಮಾಡಿ ಅಂತ ಒತ್ತಾಯ ಮಾಡಿ ಕೋರ್ಟಿಗೂ ಹೋಗಿದ್ದರು
ಇತರ ದೇಶಗಳ ಇತಿಹಾಸ ತೆಗೆದರೆ ಉಪನ್ಯಾಸಕರು ಆಂದೋಲನಗಳಲ್ಲಿ ತೊಡಗಿಕೊಂಡು ಜನರಿಗೆ ಆದರ್ಶರಾದ ಉದಾಹರಣೆ ಸಿಕ್ಕುತ್ತದೆ ಇಲ್ಲಿಯವರಿಗೆ ಅದರ ಗಂಧಗಾಳಿ ಗೊತ್ತಿಲ್ಲ  ಸರಕಾರ ಇನ್ನೊಂದು ಯುಜಿಸಿ ವೇತನ ಆಯೋಗ ರಚಿಸುವ ಕಾಲ ಸನ್ನಿಹಿತವಾಗಿದೆ  ಮುರಳಿ ಮನೋಹರ ಜೋಷಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ  ನೆಟ್  ರಾಷ್ಟ್ರೀಯ ಪರೀಕ್ಷೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದೆ ಅಡಿ ಇಟ್ಟಿದ್ದರು  ಆ ಹಿನ್ನೆಲೆಯಲ್ಲಿಯೇ ಯುಜಿಸಿ ಸ್ಕೇಲ್ ರೂಪಿಸಲಾಗಿತ್ತು  ಇಂದು ಕರ್ನಾಟಕದಲ್ಲಿ ಈ ಉಪನ್ಯಾಸಕರು  ನೆಟ್  ಪರೀಕ್ಷೆ ಪಾಸಾಗಲು ತಯಾರಿಲ್ಲ  ಆದರೆ ಯುಜಿಸಿ ಸ್ಕೇಲ್ ಪಡೆಯುತ್ತಿದ್ದಾರೆ   ನೆಟ್  ಬರೆಯಲು ವಯೋಮಿತಿ ಇಲ ಎಂಬ ಅಂಶ ಇಲ್ಲಿ ಉಲ್ಲೇಖನೀಯ  ಅಮುಕ್ತದ ಮುಖಂಡರು ನೆಟ್ ಪಾಸಾಗದ ಲಾಭ ಮಾತ್ರ ಇರಲಿ ಎಂಬ ಮನೋಭಾವದವರು

ಇವರು ಪ್ರೊಫೆಸರ್ ಅಲ್ಲ
ಅಮುಕ್ತದ ಪದಾಧಿಕಾರಿಗಳೂ ಸೇರಿದಂತೆ ಉಪನ್ಯಾಸಕರು ಪ್ರೊಫೆಸರ್ ಎಂಬ ಅಭಿದಾನವನ್ನು ಹಾಕಿಕೊಳ್ಳುತ್ತಿದ್ದಾರೆ. ಆ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾದವರೇ ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ. ಕಾಲೇಜುಗಳಲ್ಲಿ ಯಾವುದೇ ಪ್ರೊಫೆಸರ್ ಇಲ್ಲ ಎಂದು ಮಂಗಳೂರು ವಿಶ್ವವಿದ್ಯಾಲದ ಗ್ರೆಡೇಶನ್ ಲಿಸ್ಟ್ ಸ್ಪಷ್ಟವಾಗಿ ಹೇಳುತ್ತದೆ. ಹಾಗಿದ್ದೂ ಅನೇಕರು ಪ್ರೊಫೆಸರ್ ಅಭಿದಾನವನ್ನು ಯಾವುದೇ ಆಳುಕಿಲ್ಲದೆ ಬಳಸುತ್ತಿದ್ದಾರೆ. ಕಾನೂನು ಪ್ರಕಾರ ಇದು ತಪ್ಪು. ಕೆಎಎಸ್ ಅಧಿಕಾರಿ ಐಎಎಸ್ ಎಂದು ಹಾಕಿಕೊಂಡರೆ ಆಗುವಷ್ಟೇ ದೊಡ್ಡ ಪ್ರಮಾದ.

ಅಮುಕ್ತ ಏನು ಮಾಡಬೇಕು
ಕನಿಷ್ಠ ಸದಸ್ಯರಿಂದ ಹಣ ಪಡೆಯುತ್ತೀರಲ್ಲ, ಅದನ್ನು ಮಜಾ ಮಾಡಿ ಉಡಾಯಿಸದೆ ಕಾಲೇಜು ಶುಲ್ಕ ಕಟ್ಟಡ ವಿದ್ಯಾರ್ಥಿಗಳಿಗೆ ನೆರವಾಗಲು ಬಳಸಿ
ಮಂಗಳೂರು ಜಂಟಿ ನಿರ್ದೇಶಕರ ಕಚೇರಿಯಲ್ಲಿ ಕೈ ಬಿಸಿ ಮಾಡದೇ ಯಾವ ಕಡತವೂ ಚಲಿಸುವುದಿಲ್ಲ  ಇಲ್ಲಿ ಬೆಂಗಳೂರಿನಿಂದ ವರ್ಗವಾಗಿ ಬಂದಿರುವ ಸಹಾಯಕ ನಿರ್ದೇಶಕರು ಇಂತಹ ಕಾರಣಕ್ಕಾಗಿಯೇ ಒಮ್ಮೆ ಸಸ್ಪೆಂಡ್ ಆಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ

  • ಡಾ ಆರ್ ರವಿಕಿರಣ