ಅಮೃತ ಸೋಮೇಶ್ವರರಿಗೆ ನಿಟ್ಟೆ ಆಸ್ಪತ್ರೆಯಲ್ಲಿ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಳುಭಾಷೆ, ಸಂಸ್ಕøತಿಗೆ ಅನುಪಮ ಸೇವೆ ಸಲ್ಲಿಸಿದ ಪ್ರೊ ಅಮೃತ ಸೋಮೇಶ್ವರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡಲ್ಪಟ್ಟ `ಭಾಷಾ ಸಮ್ಮಾನ್’ ಪ್ರಶಸ್ತಿಯನ್ನು ನಿಟ್ಟೆ ವೈದ್ಯಕೀಯ  ಕಾಲೇಜ್ ಆಸ್ಪತ್ರೆಯಲ್ಲಿ ಪ್ರದಾನ ಮಾಡಲಾಯಿತು.

ಅನಾರೋಗ್ಯದ ನಿಮಿತ್ತ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರೊ ಅಮೃತ ಸೋಮೇಶ್ವರ ಅವರಿಗೆ ಈ ಪ್ರಶಸ್ತಿಯನ್ನು ಆಸ್ಪತ್ರೆಯ ಅತಿಥಿಗಳ ಸಮ್ಮುಖದಲ್ಲಿ ನೀಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ಕಂಬಾರ ಅವರು ತಮ್ಮ ಮತ್ತು ಗೌರಿ ಲಂಕೇಶ್ ಅವರ ನಡುವೆ ಇದ್ದ ಬಾಂಧವ್ಯವನ್ನು ಸ್ಮರಿಸಿಕೊಂಡರು. ಅಮೃತ ಸೋಮೇಶ್ವರ ಅವರು ಎಲ್ಲರಂತೆ ಶೀಘ್ರವೇ ಆರೋಗ್ಯವಂತರಾಗಿ ಬರುವಂತೆ ಗಣ್ಯರು ಆಶಿಸಿದರು.