ಜನರ ವಿಶ್ವಾಸ ಗಳಿಸಿದ `ಅಮ್ಮಾ’ ಯೋಜನೆಗಳು

ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ.

ಆಕೆ ಮುಖ್ಯಮಂತ್ರಿಯಾದ ಅವಧಿಯಲ್ಲೆಲ್ಲ ಹಲವು ಯೋಜನೆಗಳನ್ನು ಜಾರಿಗೆ ತಂದರು. ತೀರಾ ಇತ್ತೀಚೆಗೆ ಹೆರಿಗೆಗಾಗಿ ಒಂಬತ್ತು ತಿಂಗಳು ರಜೆ ಘೋಷಿಸಿದ್ದರು. ಮನೆ ಕಟ್ಟುವುದಕ್ಕಾಗಿ ಅಮ್ಮ ಸಿಮೆಂಟ್, ಅಮ್ಮ ನೀರಿನ ಯೋಜನೆ, ಕ್ಯಾಂಟೀನ್ ಹೀಗೆ ಹಲವಾರು ಯೋಜನೆಗಳಿವೆ.

ಮದುವೆ ವೇಳೆ ತಾಳಿ ನೀಡುವಂಥ ಅಮ್ಮಾ ಯೋಜನೆಗೆ ಅಪಾರ ಮನ್ನಣೆ ದೊರೆಯಿತು. ಇವೆಲ್ಲ ಸರಕಾರದ ಹಣ ಪೆÇೀಲು ಮಾಡುವ ಯೋಜನೆಗಳು ಎಂಬ ಟೀಕೆಗಳೇನಿದ್ದರೂ ಅವುಗಳು ಬಡವರ ಪಾಲಿಗೆ ವರದಂತಾಗಿದ್ದವು, ಜಯಲಲಿತಾ ದೇವತೆಯಾಗಿ ಕಂಡರು. ಆ ಕಾರಣಕ್ಕೆ ಅಮ್ಮನ ಅಂತಃಕರಣ ಆಕೆಯಲ್ಲಿ ಕಂಡುಬಂತು.

ಮಳೆ ನೀರು ಸಂಗ್ರಹ ಕಡ್ಡಾಯ, ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಜಾರಿಗೆ ತಂದ ಯೋಜನೆಗಳು ಕೆಲ ವರ್ಷಗಳಲ್ಲೇ ಸಕಾರಾತ್ಮಕ ಬದಲಾವಣೆಗಳನ್ನು ತಂದವು.

ಜಯಲಲಿತಾ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ.

ಎಲ್ಲ ಮಹಿಳೆಯರೇ ಇರುವ ಪೆÇಲೀಸ್ ಠಾಣೆ : ಮಹಿಳೆಯರೇ ಇರುವ ಪೆÇಲೀಸ್ ಠಾಣೆಯನ್ನು ಮೊದಲಿಗೆ ತಮಿಳ್ನಾಡಿನಲ್ಲಿ ಜಯಲಲಿತಾ ಸೀಎಂ ಆಗಿದ್ದಾಗ 1992ರಲ್ಲಿ ಆರಂಭಿಸಲಾಯಿತು. ಸದ್ಯಕ್ಕೆ ಅಂಥ 200 ಪೆÇಲೀಸ್ ಠಾಣೆ  ಅಂದರೆ ಶೇ 40ರಷ್ಟು ಅಂಥ ಪೆÇಲೀಸ್ ಠಾಣೆಗಳು ತಮಿಳುನಾಡಿನಲ್ಲಿವೆ.

ಮಗು ತೊಟ್ಟಿಲು ಯೋಜನೆ : ಈ ಯೋಜನೆ 1992ರಲ್ಲಿ ಸೇಲಂನಲ್ಲಿ ಆರಂಭಿಸಲಾಯಿತು. ಈ ಯೋಜನೆ ಉದ್ದೇಶವು ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದಾಗಿತ್ತು. ಹೆಣ್ಣುಮಕ್ಕಳ ಭ್ರೂಣ ಹತ್ಯೆ ತಡೆಯುವುದಾಗಿತ್ತು. 2011ರ ವೇಳೆಗೆ ತಮಿಳುನಾಡಿನಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಏರಿಕೆ ಕಾಣಿಸಿಕೊಂಡಿತು.

ಕುಡಿಯುವ ನೀರಿನ ಯೋಜನೆ : ಚೆನ್ನೈನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದ್ದು 2004ರಲ್ಲಿ. ಈ ಯೋಜನೆಯನ್ನು ಮೊದಲಿಗೆ ಪರಿಚಯಿಸಿದವರು ಸಿ ಎನ್ ಅಣ್ಣಾದುರೈ, ಆ ನಂತರ ಕರುಣಾನಿಧಿ ಮುಂದುವರಿಸಿದರು. ಆ ನಂತರ ಈ ಯೋಜನೆಗೆ ಮರುಜೀವ ನೀಡಿದವರು ಜಯಲಲಿತಾ. 2001ರಲ್ಲಿ ಈ ಯೋಜನೆಗೆ ನ್ಯೂ ವೀರಣಂ ಎಂಬ ಹೆಸರು ಕೊಡಲಾಯಿತು.

ಮಳೆ ನೀರು ಸಂಗ್ರಹ  : 2001ರ ನಂತರ ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹವನ್ನು ಎಲ್ಲ ಕಟ್ಟಡದಲ್ಲಿಯೂ ಕಡ್ಡಾಯ ಮಾಡಲಾಯಿತು. ಈ ಯೋಜನೆ ಜಾರಿಗೆ ತಂದ ನಂತರ ಚೆನ್ನೈನಲ್ಲಿ ಅಂತರ್ಜಲ ಮಟ್ಟದಲ್ಲಿ ಗುರುತಿಸುವಂಥ ಬದಲಾವಣೆ ಕಾಣಿಸಿಕೊಂಡಿತು.

ಪುಕ್ಕಟೆ ಲ್ಯಾಪ್ ಟಾಪ್ : 2011ರಲ್ಲಿ ಈ ಯೋಜನೆಯನ್ನು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿಚಯಿಸಲಾಯಿತು. ಇದರಿಂದ 3.25 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಅಮ್ಮ ಕ್ಯಾಂಟೀನ್ : 2013ರಲ್ಲಿ ಈ ಯೋಜನೆ ಪರಿಚಯಿಸಲಾಯಿತು. ಅಗ್ಗದ ದರಕ್ಕೆ ಆಹಾರ ಒದಗಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಇಡ್ಲಿಗೆ 1 ಋಉ , ಪೆÇಂಗಲ್ 5 ಋಉ ಹಾಗೂ ಮೊಸರನ್ನಕ್ಕೆ 3 ರುಪಾಯಿ ಇದೆ. (ಕನ್ನಡ ಒನ್ ಇಂಡಿಯಾ)