`ಕೆಬಿಸಿ’ಯಲ್ಲಿ ಮತ್ತೆ ಅಮಿತಾಭ್

ಜನಪ್ರಿಯ ರಿಯಾಲಿಟಿ ಶೋ `ಕೌನ್ ಬನೇಗಾ ಕರೋಡ್‍ಪತಿ’ ಒಂಬತ್ತನೇ ಆವೃತ್ತಿಯನ್ನೂ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡಲಿದ್ದಾರೆ. ಒಂಬತ್ತನೇ ಆವೃತ್ತಿಗೆ ಹೋಸ್ಟ್ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ಅಂತೂ ತೆರೆ ಬಿದ್ದಿದೆ. ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸೋನಿ ವಾಹಿನಿ ಹೋಸ್ಟ್ ಆಗಲು ಕೇಳಿಕೊಂಡಿದೆ ಎಂಬ ಸುದ್ದಿ ಇತ್ತು. ಆದರೆ ಬಿಗ್ ಬಿಯ ಕಂಚಿನ ಕಂಠದ ಮುಂದೆ ಯಾವ ನಿರೂಪಕರೂ ಅವರ ಹತ್ತಿರ ಸುಳಿಯಲಾರರು ಎಂಬ ಸತ್ಯ ಮನಗಂಡ ಕಾರ್ಯಕ್ರಮದ ಸಂಘಟಕರು ಮತ್ತೆ ಅಮಿತಾಬ್ ಅವರನ್ನೇ ಕೆಬಿಸಿ ಹೋಸ್ಟ್ ಆಗಿ ಕರೆತರಲು ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನೋಂದಣಿಗೆ ಸೋನಿ ವಾಹಿನಿ ದಿನಾಂಕ ಪ್ರಕಟಿಸಿದ್ದು ಮೊನ್ನೆ ಜೂನ್ 17ರಿಂದ ನೋಂದಣಿ ಶುರುವಾಗಿದೆ.

ಇದನ್ನು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಖುದ್ದಾಗಿ ಅಮಿತಾಬ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. `ಕೌನ್ ಬನೇಗಾ ಕರೋಡ್‍ಪತಿ’ಯ ಕೆಲವು ತುಣುಕುಗಳನ್ನೂ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಅಂತೂ ಕೆಲವೇ ದಿನಗಳಲ್ಲಿ `ದೇವಿಯೋ ಔರ್ ಸಜ್ಜನೋ’ ಎನ್ನುವ ಪದ ಮತ್ತೆ ಪ್ರೇಕ್ಷಕರು ಕೇಳಬಹುದಾಗಿದೆ.