`ದಂಗಾಲ್’ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದ ಆಮೀರ್

ಆಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ `ದಂಗಾಲ್’ ಡಿಸೆಂಬರ್ 23ರಂದು ರಿಲೀಸ್ ಆಗಲಿದೆ. ಈ ಚಿತ್ರ ಬಾಕ್ಸಾಫೀಸಿನಲ್ಲಿ ಸೂಪರ್ ಹಿಟ್ ಆಗಬಹುದು ಎನ್ನುವ ನಿರೀಕ್ಷೆ ಎಲ್ಲರದ್ದಾಗಿದ್ದರೆ ಆಮೀರ್ ಮಾತ್ರ ಈ ಚಿತ್ರದ ಬಗ್ಗೆ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಂಡಿಲ್ಲವಂತೆ.
“ನಾನು ನನ್ನ ಚಿತ್ರ ಹೆಚ್ಚು ಗಳಿಕೆ ಮಾಡಬೇಕು ಎಂಬ ನಿರೀಕ್ಷೆ ಇಟ್ಟುಕೊಂಡವನೇ ಅಲ್ಲ. ಜನ ನನ್ನ ಚಿತ್ರಗಳನ್ನು ಮೆಚ್ಚಿದರೆ ಸಾಕು. ಇತ್ತೀಚಿನ ದಿನಗಳಲ್ಲಿ ಕೆಲವರು ಚಿತ್ರದ ಗಳಿಕೆಯ ಮೊತ್ತವನ್ನೇ ಬದಲಾಯಿಸುತ್ತಾರೆ. ಆದರೆ, ಚಿತ್ರರಂಗದಲ್ಲಿ ಇರುವ ಎಲ್ಲರಿಗೂ ನಿಜ ಏನು ಎಂಬುದು ಗೊತ್ತಿದೆ. ನಾನು ಯಾವತ್ತೂ ಇಂತಹ ಸುಳ್ಳು ಲೆಕ್ಕವನ್ನು ಕೊಟ್ಟಿಲ್ಲ. `ದಂಗಾಲ್’ ಚಿತ್ರಕ್ಕೆ ಸುಮಾರು 70 ಕೋಟಿ ಖರ್ಚಾಗಿದೆ. ಹೀಗಾಗಿ, ಕಡೇ ಪಕ್ಷ ಇಷ್ಟಾದರೂ ಚಿತ್ರ ಗಳಿಸಬಹುದು ಎಂಬ ವಿಶ್ವಾಸ ನಮಗಿದೆ” ಎನ್ನುತ್ತಾರೆ ಆಮೀರ್.
ಚಿತ್ರರಂಗದ ವಿಶ್ಲೇಷಕರ ಪ್ರಕಾರ ಈ ಸಿನಿಮಾ ನೂರು ಕೋಟಿ ರೂಗಿಂತಲೂ ಹೆಚ್ಚು ಗಳಿಸುತ್ತದೆ. ಯಾವುದಕ್ಕೂ ಈ ತಿಂಗಳ ಕೊನೆಯಲ್ಲಂತೂ ಫಲಿತಾಂಶ ಗೊತ್ತಾಗುತ್ತದೆ.