ಅಪಹರಣ ಸುದ್ದಿ ನಡುವೆ ವಿದ್ಯಾರ್ಥಿ ಕೊನೆಗೂ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿರುವುದಾಗಿ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಮನೆಯವರು ಊರವರು ಗಂಟೆಗಳ ಕಾಲ ನಡೆದ ಹುಡುಕಾಟದ ಮಧ್ಯೆ ವಿದ್ಯಾರ್ಥಿಯನ್ನು ರೈಲು ನಿಲ್ದಾಣದಲ್ಲಿ ಪತ್ತೆ ಹಚ್ಚಲಾಯಿತು.

ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಬಂದ್ಯೋಡ್ ಅಡ್ಕ ನಿವಾಸಿ ಹನೀಫ್ ಮೌಲವಿಯ ಪುತ್ರ ಅಲಿ ಅನಸ್ (11) ನಾಪತ್ತೆಯಾದನೆಂದು ಹೇಳಲಾದ ಬಾಲಕ.

ಸೋಮವಾರ ಬೆಳಿಗ್ಗೆ ಶಾಲೆಗೆಂದು ತೆರಳಿದ್ದ ಅಲಿ ಅನಸ್ ಶಾಲೆಗೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಅಪಹರಿಸಿರುವುದಾಗಿ ಸುದ್ದಿಹಬ್ಬಿದೆ. ಇದರಿಂದ ಆತಂಕಿತರಾದ ಮನೆಯವರು ಹಾಗೂ ಊರವರು ಕೂಡಲೇ ಕುಂಬಳೆ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಮಂಗಳವಾರ ಮುಂಜಾನೆ 3.45ರ ಸುಮಾರಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲಾಗಿದೆ.

ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ಬೆಂಚಿನಲ್ಲಿ ಮಲಗಿ ನಿದ್ರಿಸುತಿದ್ದ ಬಾಲಕನನ್ನು  ಆರ್ ಸಿ ಎಫ್ ಪೆÇಲೀಸರು ಪತ್ತೆ ಹಚ್ಚಿ ಬಳಿಕ ಕುಂಬಳೆ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯವರು ಆಗಮಿಸಿ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿದ್ದಾರೆ.

ಕ್ರೀಡೆಯಲ್ಲಿ ಆಸಕ್ತಿ ಇರುವ ಅಲಿ ಹಸನ್ ಕೋಝಿಕ್ಕೋಡಲ್ಲಿ ನಡೆಯುತ್ತಿರುವ ಕ್ರೀಡಾ ಮೇಳ ಕಾಣಲೆಂದು ಮನೆಯಿಂದ ತೆರಳಿರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ. ಹಿಂತಿರುಗಿ ರೈಲಿನಲ್ಲಿ ಕಾಸರಗೋಡು ಬಂದಿಳಿದಾಗ ರಾತ್ರಿಯಾದ ಹಿನ್ನೆಲೆಯಲ್ಲಿ ಮನೆಗೆ ತೆರಳಲು ಸಾಧ್ಯವಾಗದೆ ರೈಲು ನಿಲ್ದಾಣದಲ್ಲಿ ಮಲಗಿರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ.