ಅಮೆರಿಕ ವಿದ್ಯಾರ್ಥಿಗಳ ಯೋಗ ಆಸಕ್ತಿ

ಮಂಗಳೂರು : ನಗರದ ಯೋಗಾಸನ ತರಗತಿಗಳು ವಿದೇಶಿ ಜನರನ್ನು ಆಕರ್ಷಿಸಲಾರಂಭಿಸಿದೆ. ನಗರದ ಸೈಂಟ್ ಅಲೋಶಿಯಸ್ ಕಾಲೇಜಿಗೆ  ಮನೋಶಾಸ್ತ್ರ ಕೋರ್ಸಿಗಾಗಿ ಸೇರಿಕೊಂಡಿರುವ ಅಮೆರಿಕದ ಐದು ಮಂದಿ ವಿದ್ಯಾರ್ಥಿಗಳ ತಂಡವು 10 ದಿನಗಳ ಯೋಗಾಸನ ತರಬೇತಿಯನ್ನು ಬಿಜೈನ ಆವಿಷ್ಕಾರ್ ಯೋಗ ಕೇಂದ್ರದಲ್ಲಿ ಪಡೆದಿದ್ದಾರೆ.

“ತರಬೇತಿಯು ಎಪ್ರಿಲ್ 2ರಂದು ಮುಗಿದಿದ್ದು ವಿದ್ಯಾರ್ಥಿಗಳಿಗೆ ಯೋಗದ ಪ್ರಾರಂಭಿಕ ವಿಚಾರಗಳಾದ ಅಷ್ಟಾಂಗ ಯೋಗ, ಕ್ರಿಯೆ, ಪ್ರಾಣಾಯಾಮ, ಪ್ರಣವ ಮತ್ತು ವಿಶ್ರಾಂತಿ ತಂತ್ರಗಳನ್ನು ಹೇಳಿಕೊಟ್ಟಿದ್ದೇವೆ. ವಿದ್ಯಾರ್ಥಿಗಳು ಯೋಗ ಕಲಿಕೆಯಲ್ಲಿ ಅತೀವ ಆಸಕ್ತಿ ತೋರಿಸಿದ್ದಾರೆ” ಎಂದು ಯೋಗ ಥೆರಪಿಸ್ಟ್ ಮತ್ತು ತರಬೇತುದಾರರಾದ ಕುಶಾಲಪ್ಪ ಗೌಡ ಹೇಳಿದ್ದಾರೆ.