ಅಮೆರಿಕಾ ಮಸೀದಿಗಳಿಗೆ `ಮುಸ್ಲಿಮರು ಕೆಟ್ಟ ಮತ್ತು ಹೊಲಸು ಜನ’ ಎಂಬ ಪತ್ರ

ಲಾಸ್ ಏಂಜಲಿಸ್ : ಮುಸ್ಲಿಮರನ್ನು “ಕೆಟ್ಟ ಮತ್ತು ಹೊಲಸು” ಜನ ಎಂದು ಜರಿದು, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ದೇಶವನ್ನು “ಶುದ್ಧೀಕರಿಸುವ” ಯೋಜನೆ ಹೊಂದಿದ್ದಾರೆಂದು ಹೇಳುವ ಪತ್ರವೊಂದು ಕ್ಯಾಲಿಫೋರ್ನಿಯಾದ ಮೂರು ಮಸೀದಿಗಳಿಗೆ ತಲುಪಿವೆಯೆಂದು ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ ಎಂಬ ಸಂಘಟನೆ ಹೇಳಿಕೊಂಡಿದೆ.

“ಸೈತಾನನ ಮಕ್ಕಳಿಗೆ” ಎಂದು ಸಂಬೋಧಿಸಲ್ಪಟ್ಟ ಈ ಮುಸ್ಲಿಂ ವಿರೋಧಿ ಪತ್ರಗಳು ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾನ್ ಜೋಸ್ ಮಸೀದಿ ಹಾಗೂ ಲಾಸ್ ಏಂಜಲಿಸ್ ನಗರದ ಲಾಂಗ್ ಬೀಚ್ ಹಾಗೂ ಕ್ಲೇರ್ ಮೌಂಟ್ ಪ್ರದೇಶಗಳಲ್ಲಿರುವ ಮಸೀದಿಗಳು ಪಡೆದಿವೆ ಎಂದು ಸಂಘಟನೆ ತಿಳಿಸಿದೆ.

ಮುಸ್ಲಿಮರನ್ನು “ಕೆಟ್ಟ ಮತ್ತು ಹೊಲಸು” ಎಂದು ಬಣ್ಣಿಸಿದ ಹೊರತಾಗಿ ಅವರಿಗೆ ತಮ್ಮ  “ಚೀಲಗಳನ್ನು ಪ್ಯಾಕ್ ಮಾಡಿ ಹೊರನಡೆಯುವಂತೆ” ಪತ್ರದಲ್ಲಿ ಹೇಳಲಾಗಿದೆ ಎಂದು ಸಂಘಟನೆ  ತಿಳಿಸಿದೆ.

“ಅಮೆರಿಕ ದೇಶವನ್ನು ಶುದ್ಧೀಕರಿಸಿ ಅದನ್ನು ಮತ್ತೆ ಪ್ರಕಾಶಿಸುವಂತೆ ಟ್ರಂಪ್ ಮಾಡಲಿದ್ದಾರೆ. ಈ  ಕಾರ್ಯವನ್ನು ಅವರು ನೀವು, ಮುಸ್ಲಿಮರಿಂದ ಆರಂಭಿಸಲಿದ್ದಾರೆ” ಎಂದು ಆ ಪತ್ರದಲ್ಲಿ ಬರೆಂiÀiಲಾಗಿದೆ ಎನ್ನಲಾಗಿದೆ.