ಅಮರನಾಥ್ ಯಾತ್ರಿ ಮೇಲೆ ದಾಳಿ ಎಲ್ಲವೂ ಎಷ್ಟೊಂದು ಕಾಕತಾಳೀಯ

ಗುಜರಾತ್ ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಿದೆ ಕಾಶ್ಮೀರದಲ್ಲಿ ಗುಜರಾತಿನಿಂದ ಬಂದ ಬಸ್ ಮೇಲೆ ಮಾತ್ರ ಉಗ್ರರ ದಾಳಿ ನಡೆಯುತ್ತದೆ ಅಮರನಾಥ್ ಯಾತ್ರಾ ಮಂಡಳಿಯೊಂದಿಗೆ ನೊಂದಾಯಿಸದಿರುವ ಏಕೈಕ ಬಸ್ಸಿದು ಸಂಜೆ 7ರ ನಂತರ ಯಾತ್ರಿಕರ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸಬಾರದು ಎಂದು 30 ವರ್ಷಗಳಿಂದ ಕಠಿಣ ನಿಯಮವನ್ನು ಮುರಿದ ಏಕೈಕ ಬಸ್ಸಿದು ಯಾವುದೇ ಸೇನಾಪಡೆ ಬೆಂಗಾವಲಿಲ್ಲದೆ ರಾತ್ರಿ ಹೊತ್ತು ಸಂಚರಿಸಿದ ಏಕಮೇವ ಬಸ್ಸಿದು ಉಗ್ರರು ಮುಂಬದಿಯಿಂದ ಗುಂಡು ಹಾರಿಸಿದ್ದರೂ ಡ್ರೈವರ್ ಮತ್ತು ಸಹಾಯಕನಿಗೆ ಏನೂ ಆಗುವುದಿಲ್ಲ ಆದರೆ ಏಳು ಮಂದಿ ಗುಜರಾತಿ ಯಾತ್ರಿಗಳು ಉಗ್ರರ ಗುಂಡೇಟಿನಿಂದ ಸಾಯುತ್ತಾರೆ ಗುಜರಾತ್ ಸರಕಾರ ಮೃತರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸುತ್ತದೆ ಯಾತ್ರಿಗಳ ಪಾರ್ಥಿವ ಶರೀರಗಳ ಯಾತ್ರೆ ಗುಜರಾತಿನಲ್ಲಿ ನಡೆಯುತ್ತದೆ ಹೌದು ಗುಜರಾತ್ ಚುನಾವಣೆ ಬರುತ್ತಿದೆ ಮುಗ್ಧರು ಹರಕೆಯ ಕುರಿಗಳಾಗುತ್ತಿದ್ದಾರೆ ಮತದಾರ ಕುರಿಗಳು ಬಿಳಿ ಗಡ್ಡ ಕರಿ ಗಡ್ಡ ಇರುವ ತೋಳಗಳ ಹಿಂದೆ ಕಣ್ಣು ಮುಚ್ಚಿ ಸಾಗುತ್ತದೆ ಅಮಾಯಕರ ಹೆಣಗಳನ್ನೇ ಪೇರಿಸಿ ಮೆಟ್ಟಿಲು ಮಾಡಿ ಮೇಲೆ ಏರಿ ಸಾಮಾನ್ಯ ಜನರ ಕಣ್ಣೀರು ನೆತ್ತರ ಕೊಳದಲ್ಲಿ ಮೀನು ಹಿಡಿದು ಅಧಿಕಾರಕ್ಕೆ ಬರುವವರೂ ಇದ್ದಾರೆ ಬಿಡಿ ಅವೆಲ್ಲಾ ಕಾಕತಾಳೀಯ ಘೋರ ನಾಟಕವನ್ನು ನಿಜ ಎಂದು ತಿಳಿಯುವ ಕುರಿಗಳು ಇರುವುದೂ ಕಾಕತಾಳೀಯ 2001ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಒಮ್ಮೆ ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ ನಡೆದಿತ್ತು. ನಂತರ 16 ವರ್ಷ ಅಮರನಾಥ ಯಾತ್ರೆ ಸುರಕ್ಷಿತವಾಗಿತ್ತು 16 ವರ್ಷಗಳ ನಂತರ ಈಗ ಮತ್ತೆ ಬಿಜೆಪಿ ಸರಕಾರವಿರುವಾಗಲೇ ಯಾತ್ರಿಗಳ ಮೇಲೆ ಉಗ್ರರ ದಾಳಿ ನಡೆದಿದೆ ಇದು ಎಷ್ಟೊಂದು ಕಾಕತಾಳೀಯವೆಂದರೆ ಗುಜರಾತಿನ ನಕಲಿ ಎನ್ಕೌಂಟರ್ ವೀರ ಪೊಲೀಸ್ ಅಧಿಕಾರಿ ಬಂಜಾರಾ ಎಂಬಾತ ತನ್ನ ನಿವೃತ್ತಿ ಸಮಯ ಕಳೆಯಲು ಕಾಶ್ಮೀರದಲ್ಲಿದ್ದ ಒಟ್ಟಾರೆ ಎಲ್ಲವೂ ಭಯಂಕರ ಕಾಕತಾಳೀಯ

  • ಎಂ ಅವಿನಾಶ್  ಮಂಗಳೂರು