ಆಳ್ವಾಸ್ ಬೆಂಬಲ ಸಭೆ ವಿರೋಧಿಸಿ ಫ್ಲೆಕ್ಸಿಗೆ ಮಸಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾವ್ಯಾ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಕೆಲವರು ಆಳ್ವಾಸ್ ಸಂಸ್ಥೆ ಮತ್ತು ಮೋಹನ ಆಳ್ವ ವಿರುದ್ಧ ನಡೆಸುತ್ತಿರುವ ಅಪಪ್ರಚಾರವನ್ನು ವಿರೋಧಿಸಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶನಿವಾರ ನಡೆಯಲಿರುವ ಸಾರ್ವಜನಿಕ ಸಭೆಯನ್ನು ಬೆಂಬಲಿಸಿ ಮಿಜಾರಿನಲ್ಲಿ ಹಾಕಲಾದ ಫ್ಲೆಕ್ಸಿಗೆ ಮಸಿ ಬಳಿಯಲಾಗಿದೆ.

ಕಾವ್ಯಾ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಬೇಕು ಹಾಗೂ ಮೋಹನ ಆಳ್ವರ ತೇಜೋವದೇ ನಿಲ್ಲಬೇಕು ಎಂಬ ಆಗ್ರಹವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಅಮರನಾಥ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಸಭೆಯನ್ನು ಇದೇ 12ರಂದು ಸ್ವರಾಜ್ಯಮೈದಾದನಲ್ಲಿ ಹಮ್ಮಿಕೊಳ್ಳಲಾಗಿದೆ. ಇದನ್ನು ಬೆಂಬಲಿಸಿ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್ ವತಿಯಿಂದ ಮಿಜಾರಿನಲ್ಲಿ ಫ್ಲೆಕ್ಸ್ ಹಾಕಲಾಗಿದ್ದು, ಇದಕ್ಕೆ ಜನರು ಮಸಿ ಬಳಿದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.