ಸದ್ದಿಲ್ಲದೇ ಹಾಲಿವುಡ್ಡಿನಲ್ಲಿ ಆಲಿ ಫಸಲ್

ಬಾಲಿವುಡ್ಡಿನಲ್ಲಿ ಹೇಳಿಕೊಳ್ಳುವಷ್ಟು ಹೆಸರು ಮಾಡದ ಆಲಿ ಫಸಲ್ ಈಗ ಹಾಲಿವುಡ್ಡಿನಲ್ಲಿ ಬ್ಯೂಸಿಯಾಗಿದ್ದಾನೆ. ಆತ ಅಭಿನಯಿಸಿರುವ ಹಾಲಿವುಡ್ ಚಿತ್ರ `ವಿಕ್ಟೋರಿಯಾ & ಅಬ್ದುಲ್’ ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಆಲಿ ಟೈಟಲ್ ರೋಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೂ ವಿಶೇಷ. ರಾಣಿ ವಿಕ್ಟೋರಿಯಾರ ಆಪ್ತ ಸೇವಕ ಅಬ್ದುಲ್ ಕರೀಂ ಪಾತ್ರದಲ್ಲಿ ಫಸಲ್ ಈ ಸಿನಿಮಾದಲ್ಲಿ ನಟಿಸಿದ್ದಾನೆ.

ಈ ಚಿತ್ರವಲ್ಲದೇ ಇನ್ನೂ ಹಾಲಿವುಡ್ಡಿನ ದೊಡ್ಡ ಬ್ಯಾನರಿನ ಎರಡು  ಚಿತ್ರಗಳಿಗೆ ಆಲಿ ಫಸಲ್ ಸಹಿ ಮಾಡಿದ್ದಾನೆ. ಅದರಲ್ಲಿ ಒಂದು ಬಯೋಪಿಕ್ ಆಗಿದ್ದು ಫಸಲ್ ಈಗ ಹಾಲಿವುಡ್ಡಿನ ಬಯೋಪಿಕ್‍ನಲ್ಲಿ ನಟಿಸಿದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾನೆ.