ಮದರಸಾದಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ : ಅಲಹಾಬಾದ್ ಹೈಕೋರ್ಟ್

ಸಾಂದರ್ಭಿಕ ಚಿತ್ರ

 ಅಲಹಾಬಾದ್ : ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದ್ದು ರಾಷ್ಟ್ರಗೀತೆ ಹಾಡುವುದರಿಂದ ತಮಗೆ ವಿನಾಯಿತಿ ನೀಡಬೇಕೆಂದು ಮದರಸಾಗಳು ಮಾಡಿರುವ ಅಪೀಲನ್ನು ತಿರಸ್ಕರಿಸಿದೆ. ಎಲ್ಲರೂ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ತೋರಬೇಕೆಂದೂ ನ್ಯಾಯಾಲಯ ತಿಳಿಸಿದೆ.  ರಾಷ್ಟ್ರಗೀತೆ ಹಾಡಬೇಕೆಂಬ ತನ್ನ ಆದೇಶವನ್ನು ಪಾಲಿಸಲಾಗುತ್ತಿರುವ ಬಗ್ಗೆ ವೀಡಿಯೋ ಆಧಾರವನ್ನೂ ಒದಗಿಸುವಂತೆ ರಾಜ್ಯ ಸರಕಾರ ಈ ಹಿಂದೆಯೇ ಮುಸ್ಲಿಂ ಸಂಸ್ಥೆಗಳಿಗೆ ಹೇಳಿದ್ದರೆ, ಬಲಪಂಥೀಯ ಹಿಂದೂ ನಾಯಕನೊಬ್ಬನ ನೇತೃತ್ವದಲ್ಲಿನ ರಾಜ್ಯ ಸರಕಾರವು  ಈ ಮೂಲಕ ಮುಸ್ಲಿಮರ ದೇಶಭಕ್ತಿಯನ್ನು ಪರೀಕ್ಷಿಸುತ್ತಿದೆಯೆಂದು ಆರೋಪಿಸಲಾಗಿತ್ತು.