ಎಲ್ಲರ ಪ್ರಾಣವೂ ಅಮೂಲ್ಯ

ಅವಿಭಜಿತ ದ ಕ ಜಿಲ್ಲೆಯಲ್ಲಿ ಬಹುತೇಕ ಅಪಘಾತಗಳಿಗೆ ಕಾರಣವಾಗುತ್ತಿರುವುದು ಓವರಟೇಕ್ ಭರಾಟೆ. ಚಾಲಕರು ಅದ್ಯಾವ ಅವಸರದಲ್ಲಿರುತ್ತಾರೋ ಇನ್ನೊಬ್ಬರನ್ನು ಹಿಂದಿಕ್ಕಿ ಸಾಗುವುದೇ ಗುರಿ ಎಂದು ಭಾವಿಸಿಕೊಂಡು ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಾರೆ ತಿರುವುಗಳಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಿದ ಪ್ರದೇಶಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಇರುವಲ್ಲಿ ಹೀಗೆ ಎಲ್ಲೆಂದರಲ್ಲಿ ಎಂಬಂತೆ ಓವರಟೇಕ್ ಮಾಡುತ್ತಾರೆ ಎಲ್ಲರ ಸಮಯವೂ ಅಮೂಲ್ಯವೇ ಅಂತೆಯೇ ಎಲ್ಲರ ಪ್ರಾಣವೂ ಅಮೂಲ್ಯ ಎನ್ನುವುದನ್ನು ಚಾಲಕರು ತಿಳಿದುಕೊಂಡಿರಬೇಕು ಸಮಯಕ್ಕೆ ಸರಿಯಾಗಿ ತಲುಪಲು ಓವರಟೇಕ್ ಮಾಡುವುದು ಸಮರ್ಪಕವಲ್ಲ ಬದಲಾಗಿ ಸೂಕ್ತ ಸಮಯಕ್ಕೆ ಹೊರಡುವುದು ಮುಖ್ಯ ಸಮಯ ಸ್ವಲ್ಪ ವ್ಯರ್ಥವಾದರೂ ಅನ್ಯರ ಮತ್ತು ತಮ್ಮ ಜೀವ ವ್ಯರ್ಥವಾಗಿ ಹೋಗದಿರಲಿ ಎಂಬುದನ್ನು ಚಾಲಕರು ಅರ್ಥ ಮಾಡಿಕೊಂಡರೆ ಅಪಘಾತಗಳನ್ನು ತಡೆಗಟ್ಟಬಹುದು

  • ಪ್ರಭಾ ಭಟ್  ಅತ್ರಾಡಿ

LEAVE A REPLY