ಕಾರ್ಕಳದಲ್ಲಿ ಏ 8, 9ರಂದು ಅಖಿಲ ಭಾರತ ಕಬಡ್ಡಿ ಪಂದ್ಯ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಜಲದುರ್ಗಾ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಕ್ಲಬ್ ತೆಳ್ಳಾರು ಕಾರ್ಕಳ ಇದರ ಪ್ರಾಯೋಜಕತ್ವದಲ್ಲಿ ರಾಷ್ಟ್ರಮಟ್ಟದ ಅಖಿಲ ಭಾರತ ಪ್ರೊ ಕಬಡ್ಡಿ ಕ್ರೀಡಾಕೂಟವು ಏ 8 ಹಾಗೂ 9ರಂದು ಕಾರ್ಕಳ ನಗರದ ಸ್ವರಾಜ್ ಮೈದಾನಲ್ಲಿ ನಡೆಯಲಿದೆ.

ಮುಂಬಯಿ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದ್ಯಮಿ ಮುನಿಯಾಲು ಉದಯ ಶೆಟ್ಟಿ ನೇತೃತ್ವದಲ್ಲಿ ಹೊನಲು ಬೆಳಕಿನಲ್ಲಿ ನಡೆಯುವ ಈ ಕ್ರೀಡಾಕೂಟ ನಡೆಯಲಿದೆ.

ಕಬಡ್ಡಿ ಕ್ರೀಡಾಕೂಟದಲ್ಲಿ ದೇಶದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿದ್ದು, ಪ್ರಮುಖವಾಗಿ ಓಎನ್‍ಜಿಸಿ, ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ, ಇಂಡಿಯನ್ ನೇವಿ, ವೆಸ್ಟ್‍ರ್ನ್ ರೈಲ್ವೇ, ಸೆಂಟ್ರಲ್ ರೈಲ್ವೇ, ಏರ್ ಪೋರ್ಸ್, ಸಿ ಆರ್ ಪಿ ಎಫ್, ವಿಜಯಾ ಬ್ಯಾಂಕ್ ಮುಂತಾದ ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.