ಮಂಗಳೂರು ತಾಲೂಕಿನ ಎಲ್ಲಾ ಗ್ರಾ ಪಂ ಆಸ್ತಿಗಳ ಮ್ಯಾಪಿಂಗ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮ ಪಂಚಾಯತುಗಳ ಆಸ್ತಿಗಳನ್ನು ಮ್ಯಾಪ್ ಮಾಡಲಾಗುವುದು. ಇಸ್ರೋ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಆಲ್ವಾಸ್ ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಜಂಟಿ ಪ್ರಯತ್ನಗಳಿಂದ ಈ ಯೋಜನೆ ಸಾಕಾರಗೊಳ್ಳಲಿದೆ. ಇಸ್ರೋದ ಭುವನ್ ಪಂಚಾಯತ್ ಯೋಜನೆಗೆ ದೇಶದಾದ್ಯಂತ ಆಯ್ಕೆಯಾದ 10 ಕಾಲೇಜುಗಳಲ್ಲಿ ಮೂಡಬಿದ್ರೆಯ ಕಾಲೇಜು ಕೂಡ ಸೇರಿದೆ.

ಬುಧವಾರ ನಡೆದ ಅಸ್ಸೆಟ್ ಮ್ಯಾಪಿಂಗ್ ಒರಿಯಂಟೇಶನ್ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಒ ಎಂ ಆರ್ ರವಿ ಉದ್ಘಾಟಿಸಿದರು. ಎಲ್ಲವೂ ಯೋಜಿಸಿದಂತೆಯೇ ನಡೆದರೆ  ಮೂರು ತಿಂಗಳೊಳಗಾಗಿ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರಕಾರಿ ಆಸ್ತಿಗಳನ್ನು ಸಂಪೂರ್ಣ ಮ್ಯಾಪ್ ಮಾಡಲ್ಪಟ್ಟ ಪ್ರಥಮ ತಾಲೂಕು ಮಂಗಳೂರು ಆಗಲಿದೆ. ಭವಿಷ್ಯದ ಗ್ರಾಮಗಳನ್ನು ಯೋಜನಾಬದ್ಧವಾಗಿ ನಿರ್ಮಿಸುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆಯೆನ್ನಲಾಗಿದ್ದು ಯೋಜನಾ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಡಲು ಉಪಗ್ರಹ ಇಮೇಜ್ ಮ್ಯಾಪುಗಳನ್ನು ಅಭಿವೃದ್ಧಿ ಪಡಿಸುವ  ಯೋಜನೆಯಿದೆ.

ಈ ನಿಟ್ಟಿನಲ್ಲಿ ವಿಸ್ತøತ ಮಾಹಿತಿಯೊದಗಿಸುವ ವೆಬ್ ತಾಣವೊಂದನ್ನೂ ನಿರ್ಮಿಸುವ ಪ್ರಸ್ತಾಪವಿದೆ.