`ಸಾಲ ಮನ್ನಾದಿಂದ ಎಲ್ಲಾ ರೈತರಿಗೆ ಲಾಭವಾಗದು’

ಶಿವಮೊಗ್ಗ : ಕೃಷಿ ಸಾಲ ಮನ್ನಾದಿಂದ ಸಾಲ ಮರು ಪಾವತಿಸುವ ರೈತರ ಬದಲಾಗಿ ನಿರಂತರ ಸಾಲ ಬಾಕಿ ಇಡುವವರಿಗೆ ಮಾತ್ರ ಲಾಭವಾಗಲಿದೆ ಎಂದು ಸೀಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯ ರೈತರು ವಾಣಿಜ್ಯ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ 42,000 ಕೋಟಿ ರೂ ಸಾಲ ಮತ್ತು ಸಹಕಾರಿ ಬ್ಯಾಂಕುಗಳಿಂದ 10,000 ಕೋಟಿ ರೂ ಸಾಲ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ರೈತರು ಪಡೆದುಕೊಂಡ ಒಟ್ಟು ಸಾಲದ ಮೊತ್ತ 52,000 ಕೋಟಿ ರೂ ಆಗಿದೆ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಸೀಎಂ ವಿವರಿಸಿದರು. “ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳ ಸಾಲ ವಸೂಲಾತಿ ಪ್ರಮಾಣ ಶೇ 90 ಆಗಿದೆ. ಹಾಗಾಗಿ ಈಗ ಸಾಲ ಮನ್ನಾ ಮಾಡಿದರೆ ಅದರ ಲಾಭವನ್ನು ಸಾಲ ಬಾಕಿ ಇಡುವವರೇ ಪಡೆದುಕೊಳ್ಳಲಿದ್ದಾರೆ” ಎಂದರು.