ಮೊದಲ ಪ್ರೀತಿ ಬಿಚ್ಚಿಟ್ಟ ಆಲಿಯಾ

ಆಲಿಯಾ ಭಟ್ ಈಗ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿರಬಹುದು. ಅದಕ್ಕೂ ಮೊದಲು ಅರ್ಜುನ್ ಕಪೂರ್ ಜೊತೆಯೂ ಕೆಲವು ಸಮಯ ಚಕ್ಕಂದ ಆಡಿದ್ದಳು ಎನ್ನುವ ರೂಮರ್ ಇತ್ತು. ಅದೇನೇ ಇದ್ದರೂ ಅವಳು ಕಾಲೇಜಿಗೆ ಹೋಗುತ್ತಿರುವಾಗಲೇ ಆಕೆ ಒಬ್ಬನ ಜೊತೆ ಡೇಟಿಂಗ್ ಮಾಡಿದ್ದ ವಿಷಯ ಸ್ವತಃ ಆಲಿಯಾಳೇ ಬಾಯ್ಬಿಟ್ಟಿದ್ದಾಳೆ.
ಆಲಿಯಾಳ ಜೀವನದಲ್ಲಿ ಮೊದಲು ಬಂದ ಹುಡುಗನ ಹೆಸರು ಆರ್ಸಲಾನ್ ಅಂತೆ. ಅವನ ಬಗ್ಗೆ ಮಾತಾಡುತ್ತಾ ಆಲಿಯಾ “ಆರ್ಸಲಾನ್ ಒಳ್ಳೆಯ ಹುಡುಗನೇ. ಆದರೆ ಅವನು ತುಂಬಾ ಪೊಸೆಸಿವ್. ನಾನು ಬರೀ ಕುರ್ತಾ ಹಾಗೂ ಜೀನ್ಸ್ ತೊಡಬೇಕೆಂದು ಆತ ಒತ್ತಾಯಿಸುತ್ತಿದ್ದ” ಎಂದು ತನ್ನ ಮೊದಲ ಹುಡುಗನ ಬಗ್ಗೆ ಬಿಚ್ಚಿಟ್ಟಿದ್ದಾಳೆ. ಅವನೀಗ ಏನು ಮಾಡುತ್ತಿದ್ದಾನೆ ಎನ್ನುವ ಪ್ರಶ್ನೆಗೆ ಆತ ಈಗ ಗ್ರಾಫಿಕ್ ಡಿಸೈನಿಂಗ್ ಮಾಡುತ್ತಿದ್ದಾನೆ. ಅವನು ಖುಶಿಯಲ್ಲಿದ್ದಾನೆ ಎಂದಿದ್ದಾಳೆ. ಜೊತೆಗೇ ನಾನು ಅಂತಹ ಸಂಬಂಧದಿಂದ ಬಹುಬೇಗ ಹೊರಬರುತ್ತೇನೆ. ನಾನು ಆ ವಿಷಯದಲ್ಲಿ ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ ಎಂದು ಹೇಳಿ ಕಣ್ಣು ಮಿಟುಕಿಸುತ್ತಾಳೆ ಆಲಿಯಾ.