ರಾಸಿಯಲ್ಲಿ ಆಲಿಯಾಳ ಡಿ-ಗ್ಲಾಮ್ ಲುಕ್

ಆಲಿಯಾ ಭಟ್ `ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರದ ನಂತರ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಆಕೆಯ ಅಭಿಮಾನಿಗಳು ಅವಳನ್ನು ತೆರೆಯ ಮೇಲೆ ನೋಡಲು ಕಾತರದಿಂದಿದ್ದಾರೆ. ಇದೀಗ ಆಲಿಯಾಳ ಮುಂಬರುವ ಚಿತ್ರ `ರಾಸಿ’ಯಲ್ಲಿಯ ಗ್ಲಾಮರ್ ರಹಿತ ಲುಕ್ ಹೊರಬಿದ್ದಿದೆ.

ಈ ಸಿನಿಮಾವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿದ್ದು ಇದೊಂದು 1971ರಲ್ಲಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮೂಡಿಬರುತ್ತಿದೆ. ಈ ಸಿನಿಮಾ ಹರಿಂದರ್ ಸಿಕ್ಕಾರ `ಕಾಲಿಂಗ್ ಸೆಹಮತ್’ ಕಾದಂಬರಿಯಾಧರಿತವಾಗಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಾಲ್ ಹೀರೋ.

ಮೇಘನಾ ಈ ಸಿನಿಮಾದ ಚಿತ್ರೀಕರಣದ ಫೊಟೋವನ್ನು ಯಾರೂ ಹೊರಗೆಡವದಂತೆ ತಾಕೀತು ಮಾಡಿದ್ದರೂ ಗುಜರಾತಿನಲ್ಲಿ ಶೂಟಿಂಗ್ ಸಮಯದಲ್ಲಿ ಆಲಿಯಾ ಅಭಿಮಾನಿಗಳು ತೆಗೆದ ಈ ಫೋಟೋ ಈಗ ಇಂಟರ್ನೆಟ್ಟಿನಲ್ಲಿ ಹರಿದಾಡುತ್ತಿದೆ. ಆಲಿಯಾ ಎಂತಹ ಪಾತ್ರವನ್ನೂ ಲೀಲಾಜಾಲವಾಗಿ ಮಾಡಬಲ್ಲಳು. ಪಾತ್ರಕ್ಕಾಗಿ ಗ್ಲಾಮರ್ ಇಲ್ಲದೇ ನಟಿಸಲೂ ಆಕೆ ಹಿಂಜರಿಯಳು. ಈಗಾಗಲೇ `ಹೈವೇ’ ಹಾಗೂ `ಉಡ್ತಾ ಪಂಜಾಬ್’ ಚಿತ್ರದಲ್ಲಿ ಮೇಕಪ್ ಇಲ್ಲದೆಯೇ ನಟಿಸಿರುವ ಆಲಿಯಾ ಈಗ ಇನ್ನೊಂದು ಅಂತದ್ದೇ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಆಕೆ ಸೈಕಲ್ ರಿಕ್ಷಾದಲ್ಲಿ ಬುರ್ಕಾ ಧರಿಸಿ ಹೋಗುತ್ತಿರುವ ಈ ಫೊಟೋದಲ್ಲಿ ಮೇಕಪ್ ಇಲ್ಲದೆಯೂ ಆಲಿಯಾ ಮುದ್ದಾಗಿ ಕಾಣಿಸುತ್ತಿದ್ದಾಳೆ.