ನನಗೆ ಕನಿಷ್ಠ 7 ವ್ಯಕ್ತಿತ್ವಗಳಿವೆ : ಆಲಿಯಾ

ಅತೀ ಚಿಕ್ಕ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿದವಳೆಂದರೆ ಆಲಿಯಾ ಭಟ್. ಅಷ್ಟಾಗಿಯೇ ಆಕೆಯೊಬ್ಬಳು ಹಮ್ಮಬಿಮ್ಮು ಇಲ್ಲದ ಸಿಂಪಲ್ ಹುಡುಗಿ. ತನಗೇ ತಾನು ಅಪಹಾಸ್ಯ ಮಾಡಿಕೊಳ್ಳಲೂ ಆಕೆ ಹಿಂಜರಿಯುವುದಿಲ್ಲ. ಸಿನಿಮಾ ಇಂಡಸ್ಟ್ರಿಯ ತನ್ನ ಪ್ರತಿಸ್ಪರ್ಧಿಗಳನ್ನೂ ಆಲಿಯಾ ಮುಕ್ತವಾಗಿ ಹೊಗಳುವುದರಲ್ಲಿಯೂ ಹಿಂದೆ ಬೀಳುವುದಿಲ್ಲ. ಎಲ್ಲರ ಜೊತೆ ನಗುತ್ತಾ ಬೆರೆಯುವ ಆಲಿಯಾ ಸಿನಿ ಇಂಡಸ್ಟ್ರಿಯ ಡಾರ್ಲಿಂಗ್ ಗರ್ಲ್. ಈಗ ಆಲಿಯಾ ತನ್ನ ಮೂಡ್ ಸ್ವಿಂಗ್ಸ್ ಬಗ್ಗೆಯೂ ಓಪನ್ನಾಗಿ ಹೇಳಿಕೊಂಡಿದ್ದಾಳೆ. ತನಗೆ ಕನಿಷ್ಠ ಏಳು ವ್ಯಕ್ತಿತ್ವಗಳಿವೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ ಆಲಿಯಾ.

ಆಲಿಯಾಳ ಮೊದಲ ಚಿತ್ರ `ಸ್ಟೂಡೆಂಟ್ ಆಫ್ ದ ಇಯರ್’ ಬಾಕ್ಸಾಫೀಸಿನಲ್ಲಿ ಉತ್ತಮವಾದ ಕಲೆಕ್ಷನ್ ಮಾಡಿದ್ದರೂ ವಿಮರ್ಶಕರಿಂದ ಆಕೆ ನಟನೆ ಬಗ್ಗೆ ಹೊಗಳಿಕೆ ಪಡೆದಿರಲಿಲ್ಲ. ಸಿನಿಮಾದಿಂದ ಸಿನಿಮಾಗೆ ತನ್ನ ಅಭಿನಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಬಂದ ಆಲಿಯಾ `ಹೈವೇ’, `ಉಡ್ತಾ ಪಂಜಾಬ್’ ಮೊದಲಾದ ಗ್ಲಾಮರ್‍ರಹಿತ ಪಾತ್ರಗಳಲ್ಲಿಯೂ ಮನೋಜ್ಞವಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಆದರೂ ಆಲಿಯಾ ತಾನು ನಟಿಯಾಗಿ ಫೇಮಸ್ ಆಗಿದ್ದಕ್ಕಿಂತ `ಕಾಫಿ ವಿದ್ ಕರಣ್’ ಶೋದಲ್ಲಿ ಭಾರತದ ಪ್ರಸಿಡೆಂಟ್ ಹೆಸರನ್ನು ತಪ್ಪಾಗಿ ಹೇಳಿ ನಗೆಪಾಟಲಿಗೀಡಾದ್ದರಿಂದಲೇ ಹೆಚ್ಚಿನ ಜನರಿಗೆ ತಾನು ಗೊತ್ತು ಎಂದು ಉದಾಹರಣೆಯನ್ನೂ ನೀಡುತ್ತಾಳೆ.

`ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಸ್ಟಾಫ್ ಒಬ್ಬಳು ಆಕೆಗೆ ನಾನು ಗೊತ್ತು ಎಂದಳು. ಬಹುಶಃ ನನ್ನ ಚಿತ್ರ ಆಕೆ ನೋಡಿರಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಜೋಕ್ಸ್ ಇಷ್ಟ ಎಂದು ವ್ಯಂಗ್ಯವಾಗಿ ನಕ್ಕಳು’ ಎಂದು ತನ್ನನ್ನು ಜನ ಅಪಹಾಸ್ಯ ಮಾಡಿದ ಬಗ್ಗೆಯೂ ಹೇಳಿಕೊಂಡಿದ್ದಾಳೆ.

“ನನಗೆ ಮೂಡ್ ಹೆಚ್ಚೂ ಕಡಿಮೆಯಾಗುವುದು ಬೇಗ. ಅದಲ್ಲದೇ ನನಗೆ 7ಕ್ಕೂ ಹೆಚ್ಚು ವ್ಯಕ್ತಿತ್ವಗಳಿವೆ. ಪಾಲಕರ ಜೊತೆ ಇರುವ ಆಲಿಯಾಳೇ ಬೇರೆ. ಸ್ನೇಹಿತರ ಜೊತೆ ಇರುವುದೇ ಬೇರೆ. ಪಾರ್ಟಿಯಲ್ಲಿ ನನ್ನ ನೇಚರೇ ಬೇರೆ, ಪಾರ್ಟಿ ಇಷ್ಟವಿಲ್ಲದಾಗ ನನ್ನ ಮೂಡೇ ಬೇರೆ, ಹೊಸಬರ ಜೊತೆ ನನ್ನ ನಡವಳಿಕೆಯೇ ಬೇರೆ, ಸೆಟ್ಟಿನಲ್ಲಿರುವ ಆಲಿಯಾಳೇ ಬೇರೆ…” ಎಂದು ತನ್ನ ವಿವಿಧ ಮುಖಗಳ ಬಗ್ಗೆ ಹೇಳಿಕೊಂಡಿದ್ದಾಳೆ ಆಲಿಯಾ.

ಪಾಲಕರ ಪ್ರೋತ್ಸಾಹ ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದು ಹೇಳುವ ಆಲಿಯಾ ತಂದೆ ಮಹೇಶ್ ಭಟ್ ತನಗೆ ಯಾವ ರೀತಿಯಲ್ಲಿ ಸಪೋರ್ಟ್ ಮಾಡುತ್ತಾರೆ ಎಂದೂ ಹೇಳಿಕೊಂಡಿದ್ದಾಳೆ. ಅವರೇ ತನ್ನ ಮೊದಲ ವಿಮರ್ಶಕರು ಎಂದು ಅಪ್ಪನ ಬಗ್ಗೆ ಆಲಿಯಾ ಅಭಿಮಾನದಿಂದ ಮಾತಾಡುತ್ತಾ¼.É