ಪೈಪಿಗೆ ಸಿಲುಕಿ ನೇತಾಡುತ್ತಿದ್ದ ಕುಡುಕ

ನಮ್ಮ ಪ್ರತಿನಿಧಿ ವರದಿ
ಬಂಟ್ವಾಳ : ಕುಡುಕನೊಬ್ಬ ವಿಚಿತ್ರವಾಗಿ ಹೆದ್ದಾರಿ ಬದಿಯ ಕಬ್ಬಿಣದ ಪೈಪಿಗೆ ಸಿಕ್ಕಿಹಾಕಿಕೊಂಡು ನೇತಾಡುವ ಮೂಲಕ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿದ ಘಟನೆ ಭಾನುವಾರ ರಾತ್ರಿ ಬಿ ಸಿ ರೋಡು ಜಂಕ್ಷನಿನಲ್ಲಿ ನಡೆದಿದೆ.
ಬಿ ಸಿ ರೋಡು ಪೇಟೆಯ ಫ್ಲೈ ಓವರ್ ಅಡಿಭಾಗದಲ್ಲಿ ಪೇ ಪಾರ್ಕಿಂಗಿಗಾಗಿ ಇತ್ತೀಚೆಗೆ ಬಂಟ್ವಾಳ ಪುರಸಭೆ ವತಿಯಿಂದ ಕಬ್ಬಿಣದ ರಾಡ್ ಹಾಕಿ ಗೇಟ್ ಅಳವಡಿಸಲಾಗಿತ್ತು. ಭಾನುವಾರ ರಾತ್ರಿ ಇದೇ ಪ್ರದೇಶದಲ್ಲಿ ಕಂಠಪೂರ್ತಿ ಕುಡಿದು ಬಂದ ಕುಡುಕನೊಬ್ಬ ತೂರಾಡುತ್ತಾ ಬಂದು ಇದೇ ಕಬ್ಬಿಣದ ರಾಡಿಗೆ ಸಿಲುಕಿಕೊಂಡು ತಾಸುಗಟ್ಟಲೆ ನೇತಾಡುತ್ತಲೇ ಇದ್ದ. ಈ ದೃಶ್ಯವು ಸಹಜವಾಗಿಯೇ ಇಲ್ಲೇ ಇದ್ದ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಗೆ ಒಂದು ರೀತಿಯ ಪುಕ್ಕಟೆ ಮನರಂಜನೆ ನೀಡುವಂತಿತ್ತು.