ಮದ್ಯವ್ಯಸನಿ ಕುಸಿದು ಸಾವು

ಕಾರ್ಕಳ : ಕಾರ್ಕಳ ಬಸ್ ನಿಲ್ದಾಣದಲ್ಲಿ ಮದ್ಯವ್ಯಸನಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೆಳುವಾಯಿ ನಿವಾಸಿ ಸುಂದರ ಆಚಾರ್ಯ (48) ಎಂಬವರು ಮೃತಪಟ್ಟ ವ್ಯಕ್ತಿ. ಅವರು ಮಂಗಳವಾರದಂದು ಕೆಲಸದ ನಿಮಿತ್ತ ಕಾರ್ಕಳಕ್ಕೆ ಬಂದವರು ವಿಪರೀತ ಮದ್ಯಸೇವನೆ ಮಾಡಿ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.