ಚರ್ಚ್ ವಿಗ್ರಹ ಧ್ವಂಸಗೈದ ಕುಡುಕ ಕ್ರೈಸ್ತನ ಬಂಧನ

ಪ್ರಕರಣಕ್ಕೆ ವಿಚಿತ್ರ ತಿರುವು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಶಿರ್ವ ಆರೋಗ್ಯ ಮಾತಾ ದೇವಾಲಯದ ಮೂರ್ತಿ ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಕುಡಕನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆತನೇ ಈ ಪ್ರಕರಣದ ಆರೋಪಿ ಎಂಬುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿ ಶಿರ್ವ ಗ್ರಾಮದ ಈ ಹಿಂದೆ ಡೈವರ್ ವೃತ್ತಿ ನಡೆಸುತ್ತಿದ್ದ ಶಿರ್ವ ಸೊಸೈಟಿ ಬಳಿಯ ನಿವಾಸಿ ಬೆನೆಟಿಕ್ಟ್ ಡಿಸೋಜ (57).

13pdb1

ಪ್ರಕರಣ ನಡೆದ ಮಧ್ಯಾಹ್ನ ಚರ್ಚ್ ಬಳಿ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಆರೋಪಿ ಜಗಳವಾಡಿದ್ದು, ಅವರು ನೀಡಿದ ಮಾಹಿತಿಯಂತೆ ಆತನನ್ನು ಬಂಧಿಸಿ ವಿಚಾರಿಸಿದಾಗ ವಿಗ್ರಹ ಭಂಜಕ ತಾನೇ ಎಂಬುದನ್ನು ಒಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಹತಾಶೆ ಕಾರಣವಂತೆ

 ದೇವರನ್ನು ಅದೇಷ್ಟೋ ಪೂಜಿಸಿದರೂ ತಕ್ಕ ಪ್ರತಿಫಲ ನೀಡಿಲ್ಲ ಎಂಬ ಕಾರಣಕ್ಕೆ ಪಕ್ಕದಲ್ಲೇ ಇದ್ದ ಮೂರ್ತಿಗಳನ್ನು ಅದಲು ಬದಲು ಮಾಡುವ ಬರದಲ್ಲಿ ಒಂದು ವಿಗ್ರಹ ಕೈ ಜಾರಿದ್ದು, ಅದನ್ನು ಗಮನಿಸಿ ಮತ್ತೊಂದನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದೇನೆ ಎಂದಿದ್ದಾನಂತೆ. ಪತ್ನಿ ಹಾಗೂ ಮಗಳು ವಿದೇಶದಲ್ಲಿದ್ದು, ಕುಡಿತದ ಚಟ ಹೊಂದಿರುವ ಈತ ಚರ್ಚಿಗೆ ಪ್ರಾರ್ಥಿಸಲು ಬಂದಾಗ ಕುಡಿತ ನಶೆಯಿಲ್ಲಿದ್ದಾಗ ಇದೆಲ್ಲ ಅವಾಂತರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಂದಿನ ಗುರುವಾರದೋಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಗಾರರು ನೀಡಿದ್ದು, ಇದರ ಫಲವಾಗಿಯೇ ಈ ಬಂಧನವಾಗಿದೆಯೇ ಎಂಬ ಸಂಶಯ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪತ್ರಕರ್ತರಿಗೂ ಮಾಹಿತಿ ಇಲ್ಲ

 ಬೈಕ್ ಕzವರನ್ನು ಬಂಧಿಸಿದಾಗಲೂ ಪತ್ರಕರ್ತರನ್ನು ಠಾಣೆಗೆ ಕರೆಯಿಸಿ ಆರೋಪಿಯೊಂದಿಗೆ ನಿಂತು ಫೋಟೋ ತೆಗಿಸಿಕೊಳ್ಳುವ ಪೊಲೀಸರು, ಈ ಕೋಮು ಗಲಭೆಗೆ ಪ್ರಚೋದÀನೆ ನೀಡಿದಂಥ ಪ್ರಕರಣದ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹೇಳಿಕೊಂಡಿದ್ದರೂ  ಯಾರಿಗೂ ಮಾಹಿತಿ ನೀಡದೆ ತಾವೇ ಆತನೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿ ಪತ್ರಕರ್ತರಿಗೆ ಕಳುಹಿಸಿ ಕೊಡುವ ಮೂಲಕ ಸಂಶಯ ಬಿತ್ತಿದಂತಾಗಿದೆ.

ಆರೋಪಿಯನ್ನು ಮಾದ್ಯಮದ ಮುಂದೆ ತರುವಲ್ಲಿ ಪೊಲೀಸರು ಏಕೆ ಹಿಂದೇಟು ಹಾಕಿದ್ದಾರೆ ಎಂಬುದಕ್ಕೆ ಯಾರಿಂದಲೂ ಉತ್ತರವಿಲ್ಲ. ಒಟ್ಟಾರೆಯಾಗಿ ಬಾರೀ ಗೊಂದಲಕ್ಕೆ ಕಾರಣವಾಗಲಿದ್ದ ಪ್ರಕರಣವೊಂದು ಶಾಂತವಾಗಿ ಅಂತ್ಯ ಕಂಡಿದೆ ಎಂಬುದೊಂದು ಸಾಮಾಧಾನ ಎನ್ನುತ್ತಾರೆ ಸಾರ್ವಜನಿಕರು.