ಕುಡಿದು ಬಿದ್ದು ಮೃತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮೆಹಂದಿ ಕಾರ್ಯಕ್ರಮಕ್ಕೆ ಹೋದ ವೃದ್ಧರೊಬ್ಬರು ವಿಪರೀತ ಕುಡಿತದಿಂದ ಮೆಹಂದಿ ನಡೆಯುತ್ತಿದ್ದ ಮನೆಯೆದುರೇ ಗದ್ದೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದಲ್ಲಿ ನಡೆದಿದೆ.

ಕಾರ್ಕಳ ತಾಲೂಕು ಕಣಜಾರು ಗ್ರಾಮದ ಮಡಿಬೆಟ್ಟು ಶಾಲೆ ಬಳಿ ನಿವಾಸಿ ಕಂಬಳಿ (65) ಸಾವನ್ನಪ್ಪಿದವರು. ಇವರು ಅಳಿಯ ಆನಂದ ಶೆಟ್ಟಿಯ ಮೆಹಂದಿ ಕಾರ್ಯಕ್ರಮಕ್ಕೆ ಕಂಬಳಿ ಹೋಗಿದ್ದು, ವಿಪರೀತ ಮದ್ಯ ಸೇವಿಸಿ ಅಲ್ಲಿಯೇ ಮನೆಯೆದರು ಗದ್ದೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೃತರ ಮಗ ಕೃಷ್ಣ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY