ಪ್ರಶಸ್ತಿಗೆ ಅಕ್ಷಯ್, ಸೋನಂ ಪ್ರತಿಕ್ರಿಯಿಸಿದ್ದು ಹೀಗೆ…

ಅಕ್ಷಯ್ ಕುಮಾರ್ `ರುಸ್ತು’ ಚಿತ್ರದ ಅಭಿನಯಕ್ಕಾಗಿ ನ್ಯಾಷನಲ್ ಅವಾರ್ಡ್ ವಿಜೇತರಾಗಿದ್ದು ಸೋನಂ ಕಪೂರ್ `ನೀರ್ಜಾ’ ಚಿತ್ರದ ನಟನೆಗಾಗಿ ಜ್ಯೂರಿಯಿಂದ ಸ್ಪೆಷಲ್ ಉಲ್ಲೇಖಗೊಂಡ ಬಗ್ಗೆ ಅವರಿಬ್ಬರೂ ಭಾರೀ ಥ್ರಿಲ್ ಆಗಿದ್ದು ಈ ರೀತಿಯ ಫೋಸ್ ನೀಡಿದ್ದಾರೆ. `ನೀರ್ಜಾ’ ಚಿತ್ರ ಬೆಸ್ಟ್ ಫಿಲ್ಮ್ ಅವಾರ್ಡ್ ತನ್ನದಾಗಿಸಿಕೊಂಡಿದೆ.

ಅಕ್ಷಯ್ ಕುಮಾರ್ ರಾಷ್ಟ್ರೀಯ ಪ್ರಶಸ್ತಿ ಬಂದ ಬಗ್ಗೆ ಮಾತಾಡುತ್ತಾ, “ನಿಜಕ್ಕೂ ನನಗೆ ಶಾಕ್ ಆಗಿದೆ. ಈ ಅವಾರ್ಡನ್ನು ನನ್ನ ಪಾಲಕರು ಹಾಗೂ ಕುಟುಂಬಸ್ಥರು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪತ್ನಿಗೆ ಅರ್ಪಿಸುತ್ತೇನೆ. ನನಗೆ ಪ್ರಶಸ್ತಿ ಯಾವಾಗಲೂ ಬರದ ಕಾರಣ ನಾನು ಪ್ರಶಸ್ತಿ ಸಮಾರಂಭಕ್ಕೆ ಹೋಗುವುದನ್ನೇ ಬಿಟ್ಟಿದ್ದೇನೆ ಎಂದು ನನ್ನ ಹೆಂಡತಿ ತಮಾಷೆ ಮಾಡುತ್ತಿರುತ್ತಾಳೆ” ಎಂದಿದ್ದಾನೆ ಅಕ್ಷಯ್ ಕುಮಾರ್. ಸೋನಂ “ಪ್ರಶಸ್ತಿ ಬಂದಿದ್ದು ನನಗಿನ್ನೂ ನಂಬಲೇ ಕಷ್ಟವಾಗುತ್ತಿದೆ” ಎಂದು ಭಾವೋದ್ರೇಕದಿಂದ ಪ್ರತಿಕ್ರಿಯಿಸಿದ್ದಾಳೆ.