ಅಕ್ಷಯ್ ಕೇಸರಿಗೆ ಪರಿಣೀತಿ ಸಾಥ್

ಅಕ್ಷಯ್ ಕುಮಾರ್ ನಾಯಕ ನಟನಾಗಿ ಅಭಿನಯಿಸಲಿರುವ `ಕೇಸರಿ’ ಚಿತ್ರದಲ್ಲಿ ನಾಯಕಿಯಾಗಿ ಪರಿಣೀತಿ ಚೋಪ್ರಾ ಆಯ್ಕೆಯಾಗಿದ್ದಾಳೆ. ಪರಿ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಕಿಲಾಡಿ ಅಕ್ಷಯ್ ಜೊತೆ ತೆರೆಹಂಚಿಕೊಳ್ಳಲಿದ್ದಾಳೆ.

ಈ ಸಿನಿಮಾ 1897ರಲ್ಲಿ ನಡೆದ ಬ್ರಿಟಿಷ್ ಇಂಡಿಯನ್ ಆರ್ಮಿ ಹಾಗೂ ಅಫ್ಘಾನಿಸ್ತಾನ್ ಟ್ರೈಬಲ್ಸ್ ನಡುವೆ ನಡೆದ ಯುದ್ಧದ ಕುರಿತಾಗಿದೆ. ಈಗಾಗಲೇ ಚಿತ್ರದಲ್ಲಿಯ ಅಕ್ಷಯ್ ಕುಮಾರ್ ಮೊದಲ ಲುಕ್ ಔಟಾಗಿದ್ದು ಆತ ಕೇಸರಿ ಬಣ್ಣದ ರುಮಾಲಿನಲ್ಲಿ ವಿಭಿನ್ನವಾಗಿ ಕಂಗೊಳಿಸುತ್ತಿದ್ದಾನೆ. ಅನುರಾಗ್ ಸಿಂಗ್ ನಿರ್ದೇಶನದ ಈ ಪೀರಿಯಡ್ ಸಿನಿಮಾ 2019ರ ಹೋಲಿ ಸಮಯದಲ್ಲಿ ರಿಲೀಸ್ ಆಗಲಿದೆ.

ಪರಿಣಿತಿ ಅರ್ಜುನ್ ಕಪೂರ್ ಜೊತೆ `ಪಿಂಕಿ ಔರ್ ಫೆರಾರಿ’ ಹಾಗೂ `ನಮಸ್ತೆ ಕೆನಡಾ’ ಹೀಗೆ ಎರಡೆರಡು ಚಿತ್ರಗಳಲ್ಲಿ ನಟಿಸಲಿದ್ದು ಮೊದಲ ಚಿತ್ರದ ಶೂಟಿಂಗ್ ಈಗ ನಡೆಯುತ್ತಿದೆ. ಅದಲ್ಲದೇ ಪರಿ ಬಾಡಿಗೆ ತಾಯಿಯಾಗಿ `ಜಾಸ್ಮಿನ್’ ಎನ್ನುವ ಚಿತ್ರದಲ್ಲೂ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

LEAVE A REPLY