ಐಶ್ವರ್ಯಾ ಆತ್ಮಹತ್ಯೆ ಸುದ್ದಿ ವೈರಲ್

ಮುಂಬೈ : ಬಾಲಿವುಡ್ ನಟಿ ಐಶ್ವರ್ಯಾ ರೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸುಳ್ಳು ಸುದ್ದಿ ರವಿವಾರದಂದು ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಹಲವರನ್ನು ಆತಂಕಕ್ಕೆ ನೂಕಿತ್ತು. ಅಂದ ಹಾಗೆ ಇಂತಹ ಸುಳ್ಳು ಸುದ್ದಿಗಳಿಗೆ ಈ ಹಿಂದೆ ಐಶ್ವರ್ಯಾ ಮಾವನೂ ಆಗಿರುವ ಅಮಿತಾಭ್ ಬಚ್ಚನ್ ಹಾಗೂ ಇನ್ನೊಬಳು ನಟಿ ಕತ್ರೀನಾ ಕೈಫ್ ಸಹಿತ ಹಲವು ನಟರು ಆಹಾರವಾಗಿದ್ದರು.

ತನ್ನ ಲೇಟೆಸ್ಟ್ ಚಿತ್ರ `ಅಯ್ ದಿಲ್ ಹೈ  ಮುಷ್ಕಿಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಹಸಿಬಿಸಿ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಕುಟುಂಬದಲ್ಲಿ ಉಂಟಾಗಿರುವ ಜಗಳಗಳು ಹಾಗೂ ವೈಮನಸ್ಸಿನಿಂದ ಬೇಸತ್ತು ಐಶ್ವರ್ಯಾ ಅತಿಯಾದ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದರೆಂಬ ಸುದ್ದಿ ಹಬ್ಬಿತ್ತು ಹಾಗೂ ಅವರ ಆತ್ಮಹತ್ಯೆ ಂiÀiತ್ನ ಹಾಗೂ ಸಾವನ್ನು ಅವರ ಕುಟುಂಬ ಮುಚ್ಚಿ ಹಾಕಿದೆಯೆಂಬ ಸುದ್ದಿಗಳೂ ಹರಡಿದ್ದವು.

ಆದರೆ ಐಶ್ ರವಿವಾರ ರಾತ್ರಿ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರ ಅವರು ಆಯೋಜಿಸಿದ್ದ ಪಾಟಿಯೊಂದರಲ್ಲಿ ಪ್ರತ್ಯಕ್ಷವಾದಾಗಲೇ ಎಲ್ಲಾ ಆತಂಕಕ್ಕೆ ಹಾಗೂ ಸುಳ್ಳು ಸುದ್ದಿಗಳಿಗೆ ತೆರೆ ಬಿತ್ತು. ಒಂದು ವೆಬ್ ತಾಣವಂತೂ ಐಶ್ವರ್ಯಾಳಿಗೆ ಚಿಕಿತ್ಸೆ ನೀಡಿದ್ದರೆನ್ನಲಾದ ವೈದ್ಯರ ಮಾತುಗಳನ್ನೂ ದಾಖಲಿಸಿತ್ತು.

ಈ ಹಿಂದೆ ನಟರಾದ ದಿಲೀಪ್ ಕುಮಾರ್, ಹನಿ ಸಿಂಗ್, ರಜನೀಕಾಂತ್ ಮತ್ತು ಗಾಯಕಿ ಲತಾ ಮಂಗೇಶ್ಕರ್ ಕೂಡ ಇಂತಹ ಸುಳ್ಳು ಸುದ್ದಿಗಳಿಗೆ ಆಹಾರವಾಗಿದ್ದರು.