`ಪದ್ಮಾವತಿ’ ಚಿತ್ರದಲ್ಲಿ ಐಶ್ವರ್ಯ ಐಟಂ

ದೀಪಿಕಾ ಪಡುಕೋಣೆಗಿಂತಲೂ ಮುಂಚೆ ಐಶ್ವರ್ಯಾ ರೈ ಬಚ್ಚನ್ ಸಂಜಯ್ ಲೀಲಾ ಬನ್ಸಾಲಿಯವರ ಹಾಟ್ ಫೇವರಿಟ್ ನಟಿಯಾಗಿದ್ದಳು. ಐಶ್ವರ್ಯಾ ನಾಯಕಿಯಾಗಿ ಬನ್ಸಾಲಿ ನಿರ್ದೇಶನದಲ್ಲಿ `ಹಮ್ ದಿಲ್ ದೇ ಚುಕೆ ಸನಮ್’, `ದೇವದಾಸ್’, `ಗುಜಾರಿಷ್’ ಚಿತ್ರಗಳು ಬಾಕ್ಸಾಫೀಸಲ್ಲಿ ಒಳ್ಳೇ ಕಲೆಕ್ಷನ್ ಮಾಡಿದ್ದವು. ಈ ಚಿತ್ರಗಳಲ್ಲಿನ ಐಶ್ವರ್ಯಾ ರೈ ಅಭಿನಯ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
ಬನ್ಸಾಲಿ ಈಗ `ಪದ್ಮಾವತಿ’ ಚಿತ್ರ ಮಾಡುತ್ತಿದ್ದು ಅದರಲ್ಲಿ ದೀಪಿಕಾ ಪಡುಕೋಣೆ ಚಿತ್ರದ ಹೀರೋಯಿನ್. ಐಶ್ವರ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾಳೆ ಎನ್ನುವ ಸುದ್ದಿಯೂ ಈ ಮೊದಲಿತ್ತು. ಆದರೆ ದೀಪಿಕಾ ಕೊನೆಗೆ ಆಯ್ಕೆಯಾಗಿದ್ದಾಳೆ. ಆದರೂ ಬನ್ಸಾಲಿಗೆ ಹೇಗಾದರೂ ಐಶ್ವರ್ಯಾಳನ್ನು ಈ ಚಿತ್ರಕ್ಕಾಗಿ ಕರೆತರಬೇಕೆನ್ನುವ ಮನಸ್ಸಿರುವುದರಿಂದ ಐಶುಳನ್ನು ಈ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿಸುತ್ತಿದ್ದಾರೆ ಬನ್ಸಾಲಿ ಸಾಬ್. ಆರು ವರ್ಷಗಳ ಗ್ಯಾಪ್ ನಂತರ ಮತ್ತೆ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ದೀಪಿಕಾಳ ಜೊತೆ ರಣವೀರ್ ಸಿಂಗ್, ಶಾಹಿದ್ ಕಪೂರ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಐಶ್ವರ್ಯಾ ಈ ಮೊದಲೂ `ಬಂಟಿ ಔರ್ ಬಬ್ಲಿ’ ಹಾಗೂ ಶಾರೂಕ್ ಖಾನ್ ಅಭಿನಯದ `ಶಕ್ತಿ’ ಸಿನಿಮಾಗಳಲ್ಲಿ ಐಟೆಂ ಹಾಡಿಗೆ ಸ್ಟೆಪ್ ಹಾಕಿದ್ದಳು. ಈಗ `ಪದ್ಮಾವತಿ’ ಚಿತ್ರದ ಈ ಸ್ಪೆಷಲ್ ಹಾಡು ಚಿತ್ರದ ಪ್ರಮೋಶನ್ನಿನಲ್ಲಿ ಹೈಲೈಟಾಗುವ ಸಾಧ್ಯತೆ ಇದೆ.