`ಏರ್ ಇಂಡಿಯಾ ವಿಶ್ವದ 3ನೇ ಅತ್ಯಂತ ಕಳಪೆ ವಿಮಾನಯಾನ ಸಂಸ್ಥೆ’

ಸಾಂದರ್ಭಿಕ ಚಿತ್ರ

 ನವದೆಹಲಿ : ಸರಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಅತ್ಯಂತ ಕಳಪೆ ನಿರ್ವಹಣೆ ತೋರುತ್ತಿರುವ ವಿಶ್ವದ ವಿಮಾನಯಾನ ಸಂಸ್ಥೆಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆಯೆಂದು ಜಾಗತಿಕ ವಿಮಾನಯಾನ ಸಂಸ್ಥೆಗಳ ಒಟಿಪಿ ಸಮೀಕ್ಷಾ ವರದಿ ತಿಳಿಸಿದೆ. ಇಸ್ರೇಲಿ ವಿಮಾನಯಾನ ಸಂಸ್ಥೆ ಇಐ ಎಐ ಹಾಗೂ ಐಸ್ ಲ್ಯಾಂಡಿನ ಇಸ್ ಲ್ಯಾಂಡ್ ಏರ್ ಸಂಸ್ಥೆಗಳ ನಂತರದ ಸ್ಥಾನದಲ್ಲಿ ಏರ್ ಇಂಡಿಯಾ ಇದೆ.

ಆದರೆ ಏರ್ ಇಂಡಿಯಾ ವಕ್ತಾರರು ಫ್ಲೈಟ್ ಸ್ಟ್ಯಾಟ್ಸ್ ಸಂಸ್ಥೆ ನಡೆಸಿದ ಈ ಸಮೀಕ್ಷಾ ವರದಿಯನ್ನು  ಮೂಲೆಗೆ ತಳ್ಳಿದ್ದು ಇದು `ಕೃತ್ರಿಮ’ ಎಂದು ಬಣ್ಣಿಸಿದ್ದಾರೆ. ಫ್ಲೈಟ್ ಸ್ಟ್ಯಾಟ್ಸ್ ಪ್ರಕಾರ ಅದು ಸುಮಾರು 500 ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಕಲೆ ಹಾಕಿ ಈ ಸಮೀಕ್ಷಾ ವರದಿಯನ್ನು ತಯಾರಿಸಿದೆ. ನೆದರ್ ಲ್ಯಾಂಡಿನ ವಿಮಾನ ಯಾನ ಸಂಸ್ಥೆ ಕೆಎಲ್ಲೆಮ್ 2016ರ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಂದು ಈ ಸಮೀಕ್ಷೆ ಗುರುತಿಸಿದೆ.