ಏರ್ ಇಂಡಿಯಾ ವಿಮಾನದಲ್ಲಿ ಇಡಲಾಗುತ್ತಿದೆ ಕೈಕೋಳ

ಸಾಂದರ್ಭಿಕ ಚಿತ್ರ

ಮುಂಬೈ : ವಿಮಾನದಲ್ಲಿ ಪ್ರಯಾಣದ ವೇಳೆ ಕೇವಲ ಒಂದು ತಿಂಗಳಲ್ಲಿ ಎರಡು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದಂತೆ  ಏರ್ ಇಂಡಿಯಾ ಸಂಸ್ಥೆ ಇನ್ನು ಮುಂದೆ ಅಶಿಸ್ತಿನ ಪ್ರಯಾಣಿಕರನ್ನು ಹದ್ದುಬಸ್ತಿನಲ್ಲಿಡಲುವಿಮಾನದಲ್ಲಿ ಕೈಕೋಳ ಹೊಂದಿರುವುದಾಗಿ ಘೋಷಿಸಿದೆ.

ವಿಮಾನದಲ್ಲಿ ಸುರಕ್ಷಿತ ಯಾನಕ್ಕೆ ಅಪಾಯಕಾರಿಯಾಗಿರುವ ಪ್ರಯಾಣಿಕರನ್ನು ಅಥವಾ ಇತರ ಪ್ರಯಾಣಿಕರಿಗೆ ಬೆದರಿಕೆಯಾಗಿರುವ ಪ್ರಯಾಣಿಕರನ್ನು ಅವರ ಸೀಟುಗಳಲ್ಲಿರುವ ಪ್ಲಾಸ್ಟಿಕ್ ಕೈಕೋಳಗಳನ್ನು ಬಳಸಿ ನಿಯಂತ್ರಿಸಬಹುದು.

ನಿಯಂತ್ರಕಗಳು ಈಗಾಗಲೇ ಅಂತರಾಷ್ಟ್ರೀಯ ವಿಮಾನಗಳಲ್ಲಿ ಅಸ್ಥಿತ್ವದಲ್ಲಿದ್ದು, ಈಗ ಪ್ರಾದೇಶಿಕ ವಿಮಾನಗಳಲ್ಲೂ ಅವುಗಳನ್ನು ಹೊಂದಿಕೊಳ್ಳುವುದಾಗಿ  ಭಾರತೀಯ ವಾಯುಯಾನ ಅಧ್ಯಕ್ಷ ಅಶ್ವಿನಿ ಲೊಹಾನಿ ಹೇಳಿದ್ದಾರೆ. ಪ್ರಯಾಣಿಕರು ಮತ್ತು ವಿಮಾನದ ಸುರಕ್ಷತೆ ಪ್ರಮುಖವಾದದು ಎಂದು ಅವರು ಹೇಳಿದ್ದಾರೆ.

ಈ ಘೋಷಣೆಯು ಎರಡು ಪ್ರತ್ಯೇಕ ಪ್ರಕರಣಗಳು ನಡೆದ ಬಳಿಕ ಹೊರಬಿದ್ದಿದೆ. ಡಿಸೆಂಬರ್ 21ರಂದು ಮುಂಬಯಿಯಿಂದ ನ್ಯೂಯಾರ್ಕಿಗೆ ಪ್ರಯಾಣ ಬೆಳೆಸಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿ ಪೊಲೀಸ್ ಅತಿಥಿಯಾಗಿರುವ ಘಟನೆ, ಇನ್ನೊಂದು ಜನವರಿ 2ರಂದು ಗಗನಸಖಿಯೊಂದಿಗೆ ಅನುಚಿತವಾಗಿ ವರ್ತನೆ ಮತ್ತು ಮಸ್ಕತ್ತಿನಿಂದ ದೆಹಲಿಗೆ ಪ್ರಯಾಣಿಸಿದ ವ್ಯಕ್ತಿ ಅನುಚಿತ ಭಾಷೆ ಬಳಸಿ ಜೈಲುವಾಸಿಯಾದ ಘಟನೆಗಳ ಬಳಿಕ ಏರ್ ಇಂಡಿಯಾ  ಈ ಮಹತ್ವದ  ಘೋಷಣೆಯನ್ನು ಮಾಡಿದೆ.