ದುಬೈ ಬದಲು ಮಸ್ಕತಿನಲ್ಲಿ ಇಳಿದ ಏರ್ ಇಂಡಿಯಾ

ಸಾಂದರ್ಭಿಕ ಚಿತ್ರ

ಹವಾಮಾನ ವೈಪರೀತ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹವಾಮಾನ ವೈಪರೀತ್ಯಕ್ಕೆ ಒಳಗಾಗಿ ದುಬೈ ಬದಲು ಮಸ್ಕತ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಏರ್ ಇಂಡಿಯಾ ವಿಮಾನ ಶುಕ್ರವಾರ ರಾತ್ರಿ 11.30ಕ್ಕೆ ಮಂಗಳೂರಿನಿಂದ ಪ್ರಯಾಣಿಕರನ್ನು ಹೇರಿಕೊಂಡು ದುಬೈಗೆ ಹೊರಟಿತ್ತು. ಈ ವಿಮಾನ ಶನಿವಾರ ಮುಂಜಾನೆ ದುಬೈಗೆ ತಲುಪಬೇಕಾಗಿತ್ತು. ಆದರೆ ದಟ್ಟ ಮೋಡ ಕವಿದ ಕಾರಣ ವಿಮಾನವನ್ನು ಬೆಳಿಗ್ಗೆ 9.30ಕ್ಕೆ ದುಬೈ ಬದಲು ಮಸ್ಕತಿನಲ್ಲಿ ಇಳಿಸಲಾಯಿತು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.