ಸುದೀಪಗೂ ಐಂದ್ರಿತಾಗೂ `ಕಿಸ್ಮತ್ ಕನೆಕ್ಷನ್’

ಸುದೀಪನಿಗೂ ಐಂದ್ರಿತಾ ರೇಗೂ ಅದೇನೋ ಒಂತರಾ ಕನೆಕ್ಷನ್ ಇದೆ. ಹಾಗಂತ ಏನೇನೋ ಯೋಚಿಸುವ ಅಗತ್ಯವಿಲ್ಲ. ಅದೊಂತರಾ ಬೇರೆಯದೇ ಕನೆಕ್ಷನ್.

ಬೆಂಗಾಲೀ ಬಾಂಬ್‍ಶೆಲ್ ಐಂದ್ರಿತಾ ರೇ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಈಗ ಅವಳು ಬೆಂಗಾಲೀ ಚಿತ್ರಗಳಲ್ಲೂ ಹೆಸರು ಮಾಡುತ್ತಿದ್ದಾಳೆ. ಅವಳ ಮೊದಲ ಬೆಂಗಾಲೀ ಸಿನಿಮಾ `ಬಚ್ಚನ್’ ಎನ್ನುವುದು ಸುದೀಪ್ ನಟಿಸಿರುವ ಕನ್ನಡ ಚಿತ್ರ `ವಿಷ್ಣವರ್ಧನ್’ ಚಿತ್ರದ ರಿಮೇಕ್. ವಿಶೇಷವೆಂದರೆ ಈಗ ಐಂದ್ರಿತಾ ನಟಿಸುತ್ತಿರುವ ಎರಡನೇ ಬೆಂಗಾಲೀ ಚಿತ್ರ ತಮಿಳಿನ ರಿಮೇಕ್ ಸಿನಿಮಾ `ಆಟೋಗ್ರಾಫ್’ ಆಗಿದ್ದು ಇದರ ಕನ್ನಡ ವರ್ಶನ್ `ಮೈ ಆಟೋಗ್ರಾಫ್’ ಚಿತ್ರದಲ್ಲಿಯೂ ಸುದೀಪ್ ಹೀರೋ ಆಗಿದ್ದ. ಈ ಸಿನಿಮಾದಲ್ಲಿ ಐಂದ್ರಿತಾ ಸೌತ್ ಇಂಡಿಯನ್ ಹುಡುಗಿಯ ರೋಲಿನಲ್ಲಿ ನಟಿಸುತ್ತಿದ್ದಾಳೆ. ಅಂದ ಹಾಗೆ ಐಂದ್ರಿತಾ ಸುದೀಪ್ ಜೊತೆ `ವೀರ ಪರಂಪರೆ’ ಸಿನಿಮಾದಲ್ಲಿ ನಟಿಸಿದ್ದಳು.