ಏಡ್ಸ್ ಪ್ರಭುತ್ವದಲ್ಲಿ ದ ಕ ಜಿಲ್ಲೆಗೆ ಮೂರನೇ ಸ್ಥಾನ, ವಲಸೆಗಾರರೇ ಕಾರಣ : ಅಧಿಕಾರಿಗಳು

ಮಂಗಳೂರು : ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಎಚ್ ಐ ವಿ/ ಏಡ್ಸ್ ಪ್ರಭುತ್ವದಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಬಾಗಲಕೋಟೆ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿವೆ. ಬಿಹಾರ, ಝಾರ್ಖಂಡ್ ಮತ್ತು ನೆರೆಯ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಗಳಿಂದ ಆರೋಗ್ಯ ಸೇವೆಗಳಿಗಾಗಿ ಮಂಗಳೂರನ್ನು ಅರಸಿ ಬರುತ್ತಿರುವ ಎಚ್ ಐ ವಿ ಸೋಂಕಿತರೇ ಜಿಲ್ಲೆಯನ್ನು ಮೂರನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.

ಜಿಲ್ಲಾ ಟೀಬಿ ಮತ್ತು ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ ಬದ್ರುದ್ದೀನ್ ಎಂ ಎನ್ ಹೇಳುವ ಪ್ರಕಾರ “ಜಿಲ್ಲೆಯಲ್ಲಿ ದಾಖಲಾದ 60 ಪ್ರತಿಶತಕ್ಕಿಂತ ಹೆಚ್ಚು ಎಚ್ ಐ ವಿ ಪ್ರಕರಣಗಳು ಜಿಲ್ಲೆಯಿಂದ ಹೊರಗಿನವರು, ಉಳಿದ 40 ಪ್ರತಿಶತ ಎಚ್ ಐ ವಿ ಸೋಂಕಿತರು ಮಾತ್ರ ಜಿಲ್ಲೆಯವರು. ಜಿಲ್ಲೆಗೆ ಉತ್ತರ ಭಾರತ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಜನರು ವಲಸೆ ಬರುತ್ತಿದ್ದು, ಅವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಾರೆ. ಇತರ ರಾಜ್ಯಗಳ ಹಲವು ಮಂದಿ ಟ್ರಕ್ ಡ್ರೈವರುಗಳಲ್ಲಿ ರೋಗ ಪತ್ತೆಯಾಗಿದೆ” ಎಂದು ಹೇಳಿದ್ದಾರೆ.

ಹಾಗಿದ್ದರೂ ಜಿಲ್ಲೆಯಲ್ಲಿ ಹೊಸ ಎಚ್ ಐ ವಿ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಏಡ್ಸ್ ವ್ಯಾಪಕತೆ ಪ್ರಮಾಣ ಶೇಕಡಾ 0.36. ಅದರ 0.13 ಶೇಕಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಬದ್ರುದ್ದೀನ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಏಡ್ಸ್ ಪ್ರಮಾಣವನ್ನು ಇಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಐಸಿಟಿ ಅಡಿಯಲ್ಲಿ ಹೆಚ್ಚಿನ ಅಪಾಯ ವಲಯದಲ್ಲಿ ಡಿಸೆಂಬರ್ 5ರಿಂದ 15ರವರೆಗೆ ಯಕ್ಷಗಾನ ಪ್ರದರ್ಶನಗಳ ಮೂಲಕ ಅರಿವು ಮೂಡಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ರೆಡ್ ರಿಬ್ಬನ್ ಕ್ಲಬ್ಬುಗಳನ್ನು 64 ಡಿಗ್ರಿ ಕಾಲೇಜುಗಳನ್ನು ತೆರೆಯಲಾಗಿದೆ. ಜಿಲ್ಲೆಯ ಆಯ್ದ 182 ಹೈಸ್ಕೂಲುಗಳಲ್ಲಿ ಹರೆಯದ ಮಧ್ಯಸ್ಥಿಕೆ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಅರಿವು ಕಾರ್ಯಕ್ರಮಗಳನ್ನು ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.