ಅತ್ಯಾಚಾರಿ ಕೃಷಿ ಇಲಾಖೆ ಹಿರಿಯ ಅಧಿಕಾರಿ ಬಂಧನ

ಸಾಂದರ್ಭಿಕ ಚಿತ್ರ

ಬೆಂಗಳೂರು : ಕೃಷಿ ಇಲಾಖೆಯಲ್ಲಿ ಗುತ್ತಿಗೆಯಾಧರಿಸಿ ಕೆಲಸ ಮಾಡುತ್ತಿದ್ದ 42 ವರ್ಷದ ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರಗೈದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಸವೇಶ್ವರ ನಗರ ನಿವಾಸಿ, 59 ವರ್ಷದ ನಾಗಪ್ಪ ಆರೋಪಿಯಾಗಿದ್ದು, ಈತನ ವಿರುದ್ಧ ನೊಂದ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಮುಂದಿನ ಆರೇಳು ತಿಂಗಳಲ್ಲಿ ನಿವೃತ್ತಿಯಾಗಲಿರುವ ನಾಗಪ್ಪನು ಕಳೆದ ವರ್ಷದ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೆ ಆರ್ ಸರ್ಕಲಿನಲ್ಲಿರುವ ತನ್ನ ಚೇಂಬರಿನಲ್ಲಿ ಈಕೆಯ ಮೇಲೆ ಕೆಲವು ಬಾರಿ ಅತ್ಯಾಚಾರಗೈದಿದ್ದ ಎಂದು ಆರೋಪಿಸಲಾಗಿದೆ.