ಹೆತ್ತಬ್ಬೆಯ ಸಾವಿನಿಂದ ನೊಂದ ಪುತ್ರ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತಾಯಿ ಅಗಲಿಕೆ ನೋವಿನಲ್ಲಿ ಪುತ್ರನೂ ಮನೆ ಬಿಟ್ಟು ತೆರಳಿದ ಘಟನೆ ನಗರದಲ್ಲಿ ನಡೆದಿದೆ. ಅಕ್ಷಯ್ ಶೇಟ್ (21) ನಾಪತ್ತೆಯಾಗಿದ್ದಾರೆ.

ಮೂಲತಃ ಮಂಗಳೂರು ನಿವಾಸಿಯಾದ ತಾಯಿ 1 ತಿಂಗಳ ಹಿಂದೆ ಅಸೌಖ್ಯದಿಂದ ಮೃತಪಟ್ಟಿದ್ದರು. ಏಕಾಏಕಿ ಮಂಗಳೂರಿನಿಂದ ಉಡುಪಿಯ ಬನ್ನಂಜೆಗೆ ಮಂಗಳವಾರ ಬೈಕಿನಲ್ಲೇ ಬಂದು ದೊಡ್ಡಮ್ಮನ ಮನೆಯಲ್ಲಿ ಉಳಿದುಕೊಂಡಿದ್ದ. ತಾಯಿಯ ನೆನಪು ಕಾಡಿದ್ದ ಕಾರಣ ಬನ್ನಂಜೆಯಿಂದ ಮಲ್ಪೆಗೆ ಹೋಗುವುದಾಗಿ ಹೇಳಿ ಹೋದಾತ ಬಳಿಕ ನಾಪತ್ತೆಯಾಗಿದ್ದಾನೆ. ಮೊಬೈಲ್ ಕೂಡಾ ಸ್ವಿಚ್‍ಆಫ್ ಆಗಿದೆ. ಉಡುಪಿ ನಗರ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.


ಇಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗೋವಿಂದರಾಜು ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಈತ ಮೊನ್ನೆ ಬೆಳಿಗ್ಗೆ ಕಾಲೇಜಿನ ಬಸ್ಸಿನಲ್ಲಿ ಕೆಂಜಾರಿನಲ್ಲಿರುವ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ತರಗತಿಗೆ ಹಾಜರಾಗಿದ್ದು ಸಂಜೆ ಕ್ಲಾಸು ಮುಗಿಸಿ ಬಳಾಲಭಾಗನಲ್ಲಿರುವ ಶ್ರೀದೇವಿ ಹಾ¸ಲಿಲ್‍ಗೆ ಮರಳಿ ಬಂದಿದ್ದಾನೆ.

ಆದರೆ ರಾತ್ರಿ 8.30 ಗಂಟೆಗೆ ಊಟದ ವೇಳೆ ಹಾಜರಾಗದೇ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕೆಲವು ವಿದ್ಯಾರ್ಥಿಗಳು ಊಟಕ್ಕೆ ಹೊಟೇಲಿಗೆ ಹೋಗುತ್ತಿದ್ದು ಅದೇ ರೀತಿ ಗೋವಿಂದರಾಜನೂ ತೆರಳಿರಬೇಕೆಂದು ಹಾಸ್ಟೆಲ್ ವಾರ್ಡನ್ ಶಂಕಿಸಿದ್ದರು. ಆದರೆ ಈತ ರಾತ್ರಿ ಆದರೂ ಮರಳಿ ಬಾರದ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬರ್ಕೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY