ಮತ್ತೆ ಅಣ್ಣ -ತಂಗಿಯಾಗಿ ಶಿವರಾಜ್-ರಾಧಿಕಾ ?

ಕನ್ನಡ ಚಿತ್ರರಂಗದ ಫೇಮಸ್ ಅಣ್ಣ-ತಂಗಿ ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಂತೆ. ಅವರನ್ನು ಅಣ್ಣ-ತಂಗಿಯರಾಗಿಸಿದ್ದ ನಿರ್ದೇಶಕ ಸಾಯಿಪ್ರಕಾಶ್ ಮತ್ತೆ ಶಿವರಾಜ್-ರಾಧಿಕಾ ಜೋಡಿಗೆ ಒಂದು ಕಥೆ ಮಾಡಿದ್ದು, ಈ ಚಿತ್ರವನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ನಿರ್ಮಿಸಲಿದ್ದಾಳಂತೆ. ಅಧಿಕೃತ ಪ್ರಕಟಣೆ ಸದ್ಯವೇ ಹೊರಬರುವ ನಿರೀಕ್ಷೆ ಇದೆ.