`ಕಾಬಿಲ್’ ನೋಡಿದ ನಂತರ ಹೃತಿಕನ ಹೊಗಳಿದ ಸುಸೇನ್

ಮುಂಬೈ : ಹೃತಿಕ್ ರೋಶನ್ ಹಾಗೂ ಸುಸೇನ್ ಖಾನ್ ನಡುವೆ ಎರಡು ವರ್ಷಗಳ ಹಿಂದೆಯೇ ಡೈವೋರ್ಸ್ ಆದರೂ ಅವರ ನಡುವಿನ `ಬಾಂಧವ್ಯ’ ಇನ್ನೂ ಹಾಗೆಯೇ ಇದೆ. ವಿಚ್ಛೇದಿತ ದಂಪತಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿರುವವರೇ ಹೆಚ್ಚು. ಹಾಗಿರುವಾಗ ಹೃತಿಕ್ ಮತ್ತು ಸುಸೇನ್ ದೂರವಾದರೂ ಒಬ್ಬರನೊಬ್ಬರು ಗೌರವದಿಂದಲೇ ಕಾಣುತ್ತಿದ್ದಾರೆ. ಅಗತ್ಯವಿದ್ದಾಗೆಲ್ಲ ಅವರು ತಮ್ಮ ಮಾಜಿಯ ಪರ ನಿಲ್ಲುತ್ತಿದ್ದರು. ಅದಲ್ಲದೇ ಇವರು ತಮ್ಮ ಮಕ್ಕಳಿಗಾಗಿ ಆಗಾಗ ಜೊತೆಯಾಗಿ ಕಾಣಿಸುತ್ತಾರೆ. ಮಕ್ಕಳೊಂದಿಗೆ ಡಿನ್ನರ್, ರಜಾ ದಿನ, ಮಕ್ಕಳ ಹುಟ್ಟುಹಬ್ಬ ಆಚರಣೆ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇವರೆಲ್ಲ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ತನ್ನ ಕುಟುಂಬ ಹಾಗೂ ಹತ್ತಿರದವರಿಗಾಗಿ ಹೃತಿಕ್ ಏರ್ಪಡಿಸಿದ್ದ `ಕಾಬಿಲ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗಿನಲ್ಲಿ ಸುಸೇನ್ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಳು.

ಸ್ಪೆಷಲ್ ಸ್ಕ್ರೀನಿಂಗಿನಲ್ಲಿ ಭಾಗವಹಿಸಿದ ಸುಸೇನ್ ಹೃತಿಕ್ ನಟನೆ ಬಗ್ಗೆ ಹೊಗಳಿ ಇನ್ಸ್‍ಸ್ಟಾಗ್ರಾಮಿನಲ್ಲಿ ಪೆÇೀಸ್ಟ್ ಮಾಡಿದ್ದಾಳೆ. “ಎಟರ್ನಲ್ ಸನ್‍ಶೈನ್ ಆಫ್ ದ ಸ್ಪೋಟ್ಲೆಸ್ ಮೈಂಡ್… ಹೃತಿಕ್ ಬಗ್ಗೆ ಹೆಮ್ಮೆ ಎನಿಸುತ್ತದೆ” ಎಂದು ಬರೆದುಕೊಂಡಿದ್ದಾಳೆ. ಜೊತೆಗೇ ತಾವಿಬ್ಬರೂ ಇರುವ ಕ್ಯೂಟ್ ಫೆÇೀಟೋ ಅಪ್ಲೋಡ್ ಮಾಡಿದ್ದಾಳೆ. ಹೃತಿಕ್ ಸುಸೇನ್ ಸೊಂಟ ಹಿಡಿದುಕೊಂಡಿದ್ದರೆ ಸುಸೇನ್ ಹೃತಿಕನನ್ನು ಎರಡೂ ಕೈಗಳಿಂದ ಬಳಸಿ ಹಿಡಿದಿರುವ ಫೋಸ್ ಬಹಳ ಮುದ್ದಾಗಿದೆ. ಅಂದ ಹಾಗೆ ಈ ಫೋಟೋ ಹಳೆಯದೇನಲ್ಲ. ಸಿನಿಮಾ ನೋಡಿದ ನಂತರವೇ ಇವರಿಬ್ಬರೂ ತೆಗೆಸಿಕೊಂಡ ಫೋಟೋ ಇದು. ಸುಸೇನ್ ಸ್ಪೆಷಲ್ ಸ್ಕ್ರೀನಿಂಗಿಗೆ ಬಂದಿದ್ದರಿಂದ ಹೃತಿಕಗೆ ಆದ ಸಂತಸ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು.

ಕೆಲವು ಸಮಯಗಳಿಂದ ಹೃತಿಕ್-ಸುಸೇನ್ ಆಗೀಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ನೋಡಿದರೆ ಈ ಜೋಡಿ ಮತ್ತೆ ಒಂದಾಗಬಹುದಾ ಎನ್ನುವ ಆಸೆ ಅವರ ಅಭಿಮಾನಿಗಳಲ್ಲೂ ಚಿಗುರಿದೆ.