ಮಹಾತ್ಮಾ ಬಳಿಕ ಇಂದಿರಾ ಮಾತ್ರ ಜನಪ್ರಿಯ : ಚಿದು

ಹೈದರಾಬಾದ್ : ಈ ದೇಶದಲ್ಲಿ ಮಹಾತ್ಮ ಗಾಂಧಿಯ ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಮಾತ್ರ ಪ್ರತಿಯೊಬ್ಬರೂ ಗುರುತಿಸಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಎಐಸಿಸಿ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರಕ್ಕೆ ಸಂಬಂಧಿಸಿದವರಾಗಿದ್ದು, ಒಂದು ಧರ್ಮ, ಪ್ರಾಂತ್ಯ ಮತ್ತು ಜಾತಿಗೆ ಹೊರತಾಗಿದ್ದರೆಂದು ವಿಚಾರಗೋಷ್ಠಿಯೊಂದರಲ್ಲಿ ವಿವರಿಸಿದರು. “ವಿಪಕ್ಷಗಳು ಇಂದಿರಾ ಗಾಂಧಿಯನ್ನು ಟೀಕಿಸಿರಬಹುದು. ಆದರೆ ಅವರ ಬಡವರ ಪರ ಕಾರ್ಯಕ್ರಮಗಳನ್ನು ಯಾವತ್ತೂ ಟೀಕಿಸಿಲ್ಲ. ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳಯವ ಧೈರ್ಯ ಅವರಲ್ಲಿ (ಇಂದಿರಾ) ಇತ್ತು” ಎಂದು ಕೇಂದ್ರದ ಮಾಜಿ ವಿತ್ತ ಸಚಿವ ತಿಳಿಸಿದರು.