ಬ್ಲೂವೇಲ್ ಆಯ್ತು ಈಗ ಡೇರ್ ಅಂಡ್ ಬ್ರೇವ್ ಗೇಮ್

ಸಾಮಾಜಿಕ ಜಾಲತಾಣ ವಿಸ್ತರಣೆಯಾ ಗುತ್ತಿದ್ದಂತೆ ಅವುಗಳ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಗುತ್ತಿದೆ. ಯುವಕರಿಗಂತೂ ಮಾರಕವಾಗಿ ಪರಿಣಮಿಸುತ್ತಿದೆ. ಈಗಾಗಲೇ ಬ್ಲೂವೇಲ್ ಗೇಮಿನಿಂದಾದ ಆತ್ಮಹತ್ಯೆಗಳನ್ನು ನೋಡಿದ್ದೇವೆ. ಇದೀಗ ಡೇರ್ ಅಂಡ್ ಬ್ರೇವ್ ಆಟದ ಮಾಯೆ ಯುವಕರು ಸಾಮಾನ್ಯವಾಗಿ ಟ್ರುತ್ ಆರ್ ಡೇರ್ ಗೇಮನ್ನು ಮನರಂಜನೆಗಾಗಿ ಆಡುವುದನ್ನು ನೋಡಿದ್ದೇವೆ. ಆದರೆ ಈ ಗೇಮಲ್ಲಿ ಟ್ರುತ್ ಅವಕಾಶವಿಲ್ಲ. ಬರೇ ಡೇರ್ ಮಾತ್ರ. ಆಟಗಾರ ಹತ್ತಿರ ಸ್ನೇಹಿತರ ವೈಯಕ್ತಿಕ ವಿವರಗಳನ್ನು ಪೊರ್ನೋಗ್ರಾಫಿ ಪಡೆದುಕೊಳ್ಳುವುದು ಈ ಗೇಮ್ ಉದ್ದೇಶ. ಐಒಎಸ್ ಅಂಡ್ರಾಯಿಸ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇಸ್ಟೋರಿನಲ್ಲಿ ಹುಡುಕಿದರೆ ಈ ಗೇಮ್ ಲಭ್ಯ. ಆದರೆ ಎಚ್ಚರವಿರಲಿ ಇದೊಂದು ಭಯಾನಕ ಆಟವಾಗಿದ್ದು ಕ್ರಿಮಿನಲ್ ಮೊಕದ್ದಮೆಯನ್ನು ಹೊರಬೇಕಾಗುತ್ತದೆ.
ಡೇರ್ ಅಂಡ್ ಬ್ರೇವ್ ಗೇಮ್ 2016ರಲ್ಲಿ ಮೊದಲಿಗೆ ಅಮೆರಿಕಾದಲ್ಲಿ ಪ್ರಾರಂಭವಾಯಿತು. ಇದೀಗ ಭಾರತಕ್ಕೆ ಹೆಜ್ಜೆ ಹಾಕಿದ್ದು ಮೊದಲ ಪ್ರಕರಣವಾಗಿ ಗುಜರಾತ್ ರಾಜ್ಯದಲ್ಲಿ 23 ವರ್ಷದ ಯುವಕನನ್ನು ಬಂಧಿಸಿದ್ದಾರೆ ಈ ಗೇಮ್ ಮತ್ತೊಬ್ಬರ ಜತೆ ಆಡಬೇಕು ಈತ ಯುವತಿಯೊಂದಿಗೆ ಡೇರ್ ಗೇಮ್ ಆಡುತ್ತಾ ಆಕೆಯ ವೈಯಕ್ತಿಕ ವಿವರ ಹಾಗೂ ಬೆತ್ತಲೆ ಚಿತ್ರಗಳನ್ನು ಕಳಿಸಲು ಕೇಳಿದ್ದನು ಈ ಬಗ್ಗೆ ತಿಳಿದ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ಹುಡುಗನ ವಿರುದ್ಧ ಎಫೈಆರ್ ದಾಖಲಿಸಿದ್ದಾರೆ ಸ್ನೇಹಿತರೊಂದಿಗೆ ಆಟವಾಡುವ ಈ ಆಟವು ವಿಜೇತನಾದವನಿಗೆ ಉಡುಗೊರೆ ನೀಡುವುದಾಗಿ ವಂಚಿಸಿ ಸ್ನೇಹಿತ ಆ ಸ್ನೇಹಿತೆಯ ಬೆತ್ತಲೆ ಚಿತ್ರ ವೀಡಿಯೋ ತುಣುಕುಗಳನ್ನು ಕಳುಹಿಸುವಂತೆ ಒತ್ತಾಯಿಸಲಾಗುತ್ತದೆ 15ರಿಂದ 25 ವರ್ಷ ವಯಸ್ಸಿನ ಯುವಕರೇ ಈ ಗೇಮ್ ಜಾಲಕ್ಕೆ ತುತ್ತಾಗುವ ಸಂಭವವಿದ್ದು ವಾಟ್ಸಪ್ ಫೇಸ್ಬುಕ್ ಮೆಸೇಂಜರುಗಳಲ್ಲಿ ಡೇರ್ ಅಂಡ್ ಬ್ರೇವ್ ಗೇಮ್ ಲಿಂಕ್ ಬಂದಲ್ಲಿ ಅದನ್ನು ತೆರೆಯದೆ ಎಚ್ಚರವಾಗಿರಿ ಮತ್ತು ಸ್ನೇಹಿತರಿಗೂ ಈ ಬಗ್ಗೆ ತಿಳಿಸುವುದೊಳಿತು

  • ಸಾಗರ್ ಕಾಂಚನ್  ಮಲ್ಪೆ  ಉಡುಪಿ