13.6 ಕೋಟಿ ರೂ ಕಪ್ಪು ಹಣ ಜತೆ ವಕೀಲ ಬಂಧನ

ನವದೆಹಲಿ : ನೋಟು ನಿಷೇಧಗೊಂಡ ಬಳಿಕ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ವಕೀಲ ರೋಹಿತ್ ಟಂಡನ್ ಕಚೇರಿಯಿಂದ 13.6 ಕೋಟಿ ರೂ ಮುಟ್ಟುಗೋಲು ಹಾಕಿದೆ.

ಎರಡು ದಿನಗಳವರೆಗೆ ಟಂಡನ್ ನನ್ನು ವಿಚಾರಣೆಗೊಳಪಡಿಸಿದ ಇಡಿ ಅಧಿಕಾರಿಗಳು, ಬುಧವಾರ ಅಧಿಕೃತವಾಗಿ ಬಂಧಿಸಿದ್ದಾರೆ. ಹಣ ವರ್ಗಾಯಿಸುವಿಕೆ ವಿರೋಧ ಕಾಯ್ದೆಯಡಿ ಟಂಡನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಈತನೊಂದಿಗೆ ದಿಲ್ಲಿಯಲ್ಲಿ ಕೋಲ್ಕತ್ತ ಮೂಲದ ಉದ್ಯಮಿ ಪಾರಸ್ ಮಾಲ್ ಲೋಧ ಮತ್ತು ಕೋಟಕ್ ಬ್ಯಾಂಕ್ ಮ್ಯಾನೇಜರ್ ಆಶಿಷ್ ಕುಮಾರ್‍ನನ್ನು ಬಂಧಿಸಲಾಗಿತ್ತು. ಈ ಜಾಲದ ಮಂದಿ ಇದುವರೆಗೆ 60 ಕೋಟಿ ರೂ ಅವ್ಯವಹಾರ ನಡೆಸಿದ್ದಾರೆನ್ನಲಾಗಿದೆ.