ದೌರ್ಜನ್ಯ ಪ್ರಕರಣದಲ್ಲಿ ವಕೀಲ ಸೇರಿ ನಾಲ್ವರಿಗೆ 2 ವರ್ಷ ಜೈಲು

ಮಂಗಳೂರು : ದೌರ್ಜನ್ಯ ಪ್ರಕರಣದಲ್ಲಿ ಒಬ್ಬ ವಕೀಲ ಸೇರಿದಂತೆ ನಾಲ್ಕು ಮಂದಿಗೆ ನಗರ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪಿತ್ತಿದೆ.

ಘಟನೆ ನಗರದ ಮಣ್ಣಗುಡ್ಡೆ ಹರಿದಾಸ ಲೇನಲ್ಲಿ 2009 ಎಪ್ರಿಲ್ 9 ರಂದು ನಡೆದಿದೆ. ಆರೋಪಿಗಳಾದ  ಉಮೇಶ್ ಪ್ರಭು, ಸಂಧ್ಯಾ ಯು ಪ್ರಭು, ರವಳನಾಥ ಪ್ರಭು ಮತ್ತು ವಿದ್ಯಾ ಯು ಪೈ ಎಂಬವರು ರಜನಿ ಮತ್ತು ಮೇಘನಾ ಎಂಬವರಿಗೆ ತಮ್ಮ ಕೈಗಳಿಂದ ದೌರ್ಜನ್ಯ ಎಸಗಿದ್ದರೆ, ಅರ್ಜುನ್ ಎಂಬಾತನಿಗೆ ಗುದ್ದಲಿಯಲ್ಲಿ ದೌರ್ಜನ್ಯವೆಸಗಿದ್ದರು. ಮಾತ್ರವಲ್ಲ ಮುಖಕ್ಕೆ ಮೆಣಸಿನ ಪುಡಿ ಎರಚಿದ್ದಾರೆ. ಪ್ರಕರಣವನ್ನು ಬಾಯ್ಬಿಟ್ಟರೆ ಕೆಟ್ಟ ಪರಿಣಾಮ ಎದುರಿಸಬೇಕಾಗಬಹುದು ಎಂದು ಹೆದರಿಸಿದ್ದಾರೆ ಎಂದು ಅವರ ವಿರುದ್ಧ ಆರೋಪ ಪಟ್ಟಿ ತಿಳಿಸಿತ್ತು.

ಆರೋಪಿಗಳು ಹರಿದಾಸ ಲೇನ್‍ನಲ್ಲಿರುವ ನಾಗೇಶ್ ಕುಮಾರ್ ಎಂಬವರ ಮನೆಯ ಕಂಪೌಂಡನ್ನು ಒಡೆದು ಹಾಕಿದ್ದರು. ಪ್ರಕರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳಿಗೆ ಮೂರು ವರ್ಷ ಜೈಲು ಮತ್ತು ದಂಡದ ಮೊತ್ತ ರೂ 10,000 ಸಂತ್ರಸ್ತರಿಗೆ ಪರಿಹಾರವಾಗಿ ನೀಡುವಂತೆ ಕೋರ್ಟು ನಿರ್ದೇಶಿಸಿದೆ.