ಚುಂಚನಗಿರಿ ಮಠದಲ್ಲಿ ಆದಿತ್ಯನಾಥ ವಾಸ್ತವ್ಯ

ಬೆಂಗಳೂರು : ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥರ ಕರ್ನಾಟಕ ಭೇಟಿಯ ವೇಳೆ ಕೆಂಗೇರಿಯ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸಿ ಜೀವನ ಕ್ರಮಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಯೋಗಿ ಭಾನುವಾರ ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಭೇಟಿ ನೀಡಿದ್ದಾರೆ.ನಗರಕ್ಕೆ ಶನಿವಾರ ಆಗಮಿಸಿದ ಯೋಗಿ ನೇರವಾಗಿ ಮಠದ ಕೆಂಗೇರಿ ಸೆಂಟರಿಗೆ ತೆರಳಿದ್ದಾರೆ. ಬಿಜೆಪಿ ಮುಖಂಡ ಆರ್ ಅಶೋಕ್ ಯೋಗಿಯ ರಾಜ್ಯ ಭೇಟಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. “ಯೋಗಿ ಆಗಮನದ ಹಿನ್ನೆಲೆಯಲ್ಲಿ ಇಲ್ಲಿ ಒಂದು ವಾರದ ಹಿಂದೆಯೇ ನಾಥ ಪಂಥ ಸಂಪ್ರದಾಯದಂತೆ ಅವರ ಸನ್ಯಾಸ ಜೀವನ ಕ್ರಮಕ್ಕೆ ಸಕಲ ಏರ್ಪಾಡು ಮಾಡಲಾಗಿದೆ” ಎಂದವರು ಹೇಳಿದ್ದಾರೆ.

ಕೇಂದ್ರದಲ್ಲಿರುವ ಯೋಗಿ ಬೆಳಿಗ್ಗೆ 3 ಗಂಟೆಗೆ ಎದ್ದು ಯೋಗ ಮಾಡುತ್ತಾರೆ. ದೈನಂದಿನ ಆಹಾರವಾಗಿ ಹಣ್ಣು, ಧಾನ್ಯ ಮತ್ತು ಓಟ್ಸ್ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲ ಮಠದಿಂದಲೇ ಪೂರೈಸಲಾಗುತ್ತಿದೆ ಎಂದರು.

“ಆದಿತ್ಯನಾಥ ಅರ್ಚಕರಾಗಿದ್ದ ಗೋರಕ್ಪುರದ ಮಠದೊಂದಿಗೆ ಆದಿಚುಂಚನಗಿರಿ ಮಠ ನಿಕಟ ನಂಟು ಹೊಂದಿದೆ. ಇವರೆಡೂ ಮಠಗಳು ನಾಥ ಪರಂಪರೆ ಹೊಂದಿದೆ. ತಾನು ಒಕ್ಕಲಿಗನಾದರೂ ನಾಥ ಪಂಥಕ್ಕೆ ಸೇರಿದವನಾಗಿದ್ದೇನೆ” ಎಂದು ಅಶೋಕ್ ಹೇಳಿದ್ದಾರೆ.

ಇಲ್ಲಿನ ವಿಜಯನಗರದ ಬಿಜಿಎಸ್ ಆಟದ ಮೈದಾನದಲ್ಲಿ ಯೋಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆದಿ ಚುಂಚನಗಿರಿ ಮಠದಲ್ಲೇ ಊಟೋಪಚಾರ ಮಾಡಲಿದ್ದಾರೆ. ಮಠದ ಸನ್ಯಾಸಿ ನಿರ್ಮಲಾನಂದನಾಥ ಸ್ವಾಮಿ ಸೀಎಂ ಯೋಗಿಯನ್ನು ಊಟಕ್ಕೆ ವೈಯಕ್ತಿಕವಾಗಿ ಆಮಂತ್ರಿಸಿದ್ದಾರೆ.

 

LEAVE A REPLY