ಸಿಎಸ್ಟಿಎಂ ನಿಲ್ದಾಣ-ಎರ್ನಾಕುಳಮ್ ಜಂಕ್ಷನ್ ನಡುವೆ ಹೆಚ್ಚುವರಿ ರೈಲು

ಮಂಗಳೂರು : ಸೆಂಟ್ರಲ್ ರೈಲ್ವೇಯು ಕೊಂಕಣ್ ರೈಲ್ವೇ ಸಂಯೋಜನೆಯಲ್ಲಿ ಮುಂಬಯಿ ಸಿಎಸ್ಟಿ-ಎರ್ನಾಕುಳಮ್ ಜಂಕ್ಷನ್-ಮುಂಬಯಿ ನಡುವೆ ಬೇಸಿಗೆ ವಿಶೇಷ ಹೆಚ್ಚುವರಿ ರೈಲುಗಳನ್ನು ಕೊಂಕಣ್ ರೈಲ್ವೇ ಮಾರ್ಗದಲ್ಲಿ ಓಡಿಸಲಿದೆ.

ರೈಲು ನಂಬರ್ 01065 ಮುಂಬಯಿ ಸಿಎಸ್ಟಿ-ಎರ್ನಾಕುಳಮ್ ಜಂಕ್ಷನ್ ಹೆಚ್ಚುವರಿ ಬೇಸಿಗೆ ವಿಶೇಷ ರೈಲು ಎಪ್ರಿಲ್ 18ರಿಂದ ಜೂನ್ 6ರವರೆಗೆ ಪ್ರತಿ ಗುರುವಾರ ಸಂಜೆ 3.35ಕ್ಕೆ ಮುಂಬಯಿ ಸಿಎಸ್ಟಿಯನ್ನು ಬಿಡಲಿದೆ ಮತ್ತು ಮರುದಿನ ಸಂಜೆ 7.15ಕ್ಕೆ ಎರ್ನಾಕುಳಮ್ ಜಂಕ್ಷನನ್ನು ತಲುಪಲಿದೆ.

ರೈಲು ನಂಬರ್ 01066 ಎರ್ನಾಕುಳಮ್ ಜಂಕ್ಷನ್-ಮುಂಬಯಿ ಸಿಎಸ್ಟಿ ಬೇಸಿಗೆ ವಿಶೇಷ ರೈಲು ಎಪ್ರಿಲ್ 19ರಿಂದ ಜೂನ್ 7ರವರೆಗೆ ಪ್ರತಿ ಬುಧವಾರ ರಾತ್ರಿ 11 ಗಂಟೆಗೆ ಎರ್ನಾಕುಳಮ್ ಜಂಕ್ಷನನ್ನು ಬಿಟ್ಟು ಮೂರನೇ ದಿನ ಬೆಳಿಗ್ಗೆ 12.40ಕ್ಕೆ ಮುಂಬಯಿ ಸಿಎಸ್ಟಿ ತಲುಪಲಿದೆ.

ರೈಲುಗಳು ದಾದರ್, ಥಾಣೆ, ಪನ್ವೇಲ್, ರೋಹಾ, ಖೇದ್, ಚಿಪ್ಲುಣ್, ರತ್ನಗಿರಿ, ಕಂಕವಾಲಿ, ಕುಡಾಲ್, ಥಿವಿಮ್, ಮಡ್ಗಾಂವ್, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡು ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು, ಕಾಸರಗೋಡು, ಕಣ್ಣೂರು, ಕೋಂಞಕೋಡು, ಶೊರನೂರು ಜಂಕ್ಷನ್ ಮತ್ತು ತ್ರಿಶೂರು ಸ್ಟೇಷನ್ನುಗಳಲ್ಲಿ ನಿಲುಗಡೆಯಾಗಲಿದೆ.