ಹಬ್ಬದ ಪ್ರಯುಕ್ತ ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್ಸುಗಳು

ಬೆಂಗಳೂರು : ಶುಕ್ರವಾರದಂದು ಯುಗಾದಿ, ಅಂಬೇಡ್ಕರ್ ಜಯಂತಿ ಹಾಗೂ ಗುಡ್ ಫ್ರೈಡೆ ಪ್ರಯುಕ್ತ ರಜೆಯಾಗಿರುವುದರಿಂದ ವಾರಾಂತ್ಯದಲ್ಲಿ  ಹೆಚ್ಚಿನ ಜನರು ಧಾರ್ಮಿಕ ವiತ್ತು ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಈ ಸಂದರ್ಭ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗುರುವಾರದಿಂದ ಶನಿವಾರದ ತನಕ 250ಕ್ಕೂ ಅಧಿಕ ಬಸ್ಸುಗಳನ್ನು ಕೆಎಸ್ಸಾರ್ಟಿಸಿ ಹೆಚ್ಚುವರಿಯಾಗಿ  ವಿವಿಧೆಡೆಗಳಿಗೆ ನಿಯೋಜಿಸಿದೆ.

ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣದಿಂದ ಹೊರಡುವ ಈ ಬಸ್ಸುಗಳು ರಾಜ್ಯದ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ,  ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗೀರ, ಬೀದರ್, ಪಾವಗಢ, ಹೊಸದುರ್ಗ ಅಲ್ಲದೆ ತಿರುಪತಿಗೂ ಸೇವೆಯೊದಗಿಸಲಿವೆ.

ಈ ವಿವಿಧ ಪ್ರದೇಶಗಳಿಂದ ಹೊರಡುವ ವಿಶೇಷ ಬಸ್ಸುಗಳು ರವಿವಾರದಂದು ಬೆಂಗಳೂರಿಗೆ ಹಿಂದಿರುಗಲಿವೆ.