ಮುದ್ರಾ ವಿದ್ಯುತ್ ಘಟಕ ರಕ್ಷಿಸಲು ಗುಜರಾತ್ ಸರ್ಕಾರಕ್ಕೆ ಅದಾನಿ ಮೊರೆ

ಹೆಚ್ಚಿನ ವಿದ್ಯುತ್ ದರ ನಿಗದಿಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತದಲ್ಲಿ ಅದಾನಿ ಮತ್ತು ಟಾಟಾ ಸಮೂಹದ ಉದ್ದಿಮೆಗಳು ಅತಂಕದ ಕ್ಷಣಗಳ್ನು ಎದುರಿಸುತ್ತಿವೆ.

ಇಂಡೋನೇಷಿಯಾದಿಂದ ಕಲ್ಲಿ ದ್ದಲು ಆಮದು ಮಾಡಿಕೊಂಡು ವಿದ್ಯುತ್ ಉತ್ಪಾದಿಸಲು ಉದ್ಯಮಿ ಗೌತಮ್ ಅದಾನಿ ಗುಜರಾತಿನಲ್ಲಿ ಸ್ಥಾಪಿಸಿದ್ದ ಗುಜರಾತ್ ವಿದ್ಯುತ್ ವಿಕಾಸ್ ನಿಗಮ್ ನಷ್ಟದಲ್ಲಿ ನಡೆಯುತ್ತಿದ್ದು, ವಿದ್ಯುತ್ ದರಗಳನ್ನು ಹೆಚ್ಚಿಸುವ ಉದ್ಯಮಿಯ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತಣ್ಣೀರೆರಚಿದೆ. ತನ್ನ 4,600 ಮೆಗಾವ್ಯಾಟ್ ಉಷ್ಣ ವಿದ್ಯುತ್ ಉತ್ಪಾದನಾ ಘಟಕ ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದು, ತನ್ನ ಈ ಉಪ ಉದ್ದಿಮೆಯಲ್ಲಿನ ಹಕ್ಕುಗಳನ್ನು ಮಾರಾಟ ಮಾಡಲೂ ಅದಾನಿ ಸಮೂಹ ನಿರ್ಧರಿಸಿದೆ. ಈ ಘಟಕದಿಂದ 2,000 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಗುಜರಾತ್ ವಿದ್ಯುತ್ ವಿಕಾಸ ನಿಗಮಕ್ಕೆ ಮುದ್ರಾ ಘಟಕದಲ್ಲಿನ ಹಕ್ಕುಗಳನ್ನು ಪರಭಾರೆ ಮಾಡಲು ಅದಾನಿ ಸಮೂಹ ನಿರ್ಧರಿಸಿದೆ.

ಆದರೆ ಸುಪ್ರೀಂ ಕೋರ್ಟ್ ಆದೇಶದ ನಂತರ ತನ್ನ ಧೋರಣೆ ಬದಲಿಸಿರುವ ಅದಾನಿ ಸಮೂಹ ಮುದ್ರಾ ಘಟಕವನ್ನು ಉಳಿಸಿಕೊಳ್ಳಲು ಅನ್ಯ ಮಾರ್ಗಗಳನ್ನು ಶೋಧಿಸುತ್ತಿದೆ. ಒಟ್ಟು 10,440 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಅದಾನಿ ಸಮೂಹದ ಉದ್ದಿಮೆಗಳು ಮುದ್ರಾ ಘಟಕವೊಂದರಲ್ಲೇ 4,620 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.  ಹೆಚ್ಚಿನ ವಿದ್ಯುತ್ ದರ ವಿಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತದಲ್ಲಿ ಅದಾನಿ ಮತ್ತು ಟಾಟಾ ಸಮೂಹದ ಉದ್ದಿಮೆಗಳು ಅತಂಕದ ಕ್ಷಣಗಳ್ನು ಎದುರಿಸುತ್ತಿವೆ. ಆಮದು ಮಾಡಿಕೊಂಡ ಕಲ್ಲಿದ್ದಲ್ಲಿನ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ರಾಜ್ಯ ವಿದ್ಯುತ್ ನಿಗಮಗಳಿಗೆ ಹೆಚ್ಚಿನ ಶುಲ್ಕ ವಿಧಿಸಲು ಅದಾನಿ ಮತ್ತು ಟಾಟಾ ಸಮೂಹದ ಉದ್ದಿಮೆಗಳು ನಿರ್ಧರಿಸಿದ್ದವು. ಈ ಪ್ರಕ್ರಿಯೆಯಲ್ಲಿ ಅದಾನಿ ಸಮೂಹದ ಒಂಭತ್ತು ಸಾವಿರ ಕೋಟಿ ರೂ.ಗಳು ಸ್ಥಗಿತಗೊಂಡಿದ್ದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅದಾನಿ ಸಮೂಹ ಅನ್ಯ ಮಾರ್ಗಗಳತ್ತ ಮುಖಮಾಡಿದೆ.