ಬ್ಯಾಂಕ್ ಉದ್ಯೋಗಿ ಕೈಹಿಡಿದ ನಟಿ ದೀಪಿಕಾ ಕಾಮಯ್ಯ

ಬೆಂಗಳೂರು : `ಚಿಂಗಾರಿ’ ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಆಸ್ಟ್ರೇಲಿಯಾ ಮೂಲದ ಸುಮಂತ್ ಗೋಪಿ ಅವರ ಜೊತೆ ಸಪ್ತಪದಿ ತುಳಿದಿದ್ದಾಳೆ ದೀಪಿಕಾ.

ದೀಪಿಕಾ ಕಾಮಯ್ಯ ಹಾಗೂ ಸುಮಂತ್ ಗೋಪಿ ಅವರ ವಿವಾಹ ಮಹೋತ್ಸವ ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಮಣಿಪಾಲ್ ಕೌಂಟಿ ರೆಸಾರ್ಟಿನಲ್ಲಿ ನೆರವೇರಿದೆ. ನಾಯ್ಡು ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಆಗಮಿಸಿ ನವ ವಧು-ವರರಿಗೆ ಶುಭ ಹಾರೈಸಿದರು.

ಶಾಸಕ ಆರ್ ವಿ ದೇವರಾಜ್ ಅವರ ಸಹೋದರನ ಪುತ್ರನಾಗಿರುವ ಸುಮಂತ್, ಆಸ್ಟ್ರೇಲಿಯಾದ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ದೀಪಿಕಾ ಬಣ್ಣದ ಬದುಕಿಗೆ ಗುಡ್ ಬೈ ಹೇಳಿದ್ದಾಳೆ.